

ಹೈದರಾಬಾದ್: ಯುವಕನೊಬ್ಬ ತನಗಿಂತ 12 ವರ್ಷ ದೊಡ್ಡವಳಾದ ಮಹಿಳೆಯನ್ನು ಪ್ರೀತಿಸಿ, ಬ್ಲೇಡ್ನಿಂದ ಆಕೆಯ ಕುತ್ತಿಗೆಯನ್ನೇ ಕತ್ತರಿಸಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಇದನ್ನೂ ಓದಿ: ಸಹಕಾರಿ ಅನುಭವಿ ಪ್ರಕಾಶ ತಪಶೆಟ್ಟಿ ಪ್ರಬಲ ಆಕಾಂಕ್ಷಿ
37 ವರ್ಷದ ಮಹಿಳೆ ಹೈದರಾಬಾದ್ನ ಬಂಜಾರ ಹಿಲ್ಸ್ನ ನಂದಿ ನಗರದಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ಗಂಡ 18 ವರ್ಷಗಳ ಹಿಂದೆಯೇ ತೀರಿಕೊಂಡಿದ್ದ. ಆಕೆಗೆ ಎರಡು ವರ್ಷಗಳ ಹಿಂದೆ ಕುಮಾರ್ ಹೆಸರಿನ 25 ವರ್ಷದ ಯುವಕನೊಂದಿಗೆ ಸ್ನೇಹವಾಗಿದೆ. ಸ್ನೇಹ ಪ್ರೀತಿಗೆ ತಿರುಗಿದೆ.
ಮಹಿಳೆ ಬುಧವಾರದಂದು ತನ್ನ ಹುಟ್ಟೂರಾದ ವಾರಂಗಲ್ ಜಿಲ್ಲೆಯ ಜಂಗಾಂವ್ನ ದೇವರ್ಪುಲಾಕ್ಕೆ ಹೊರಟಿದ್ದಳು. ಕುಮಾರ್ ಕೂಡ ಅದೇ ಹಳ್ಳಿಯವನಾಗಿದ್ದರಿಂದ ಇಬ್ಬರು ಒಟ್ಟಿಗೆ ಹೋಗುವ ನಿರ್ಧಾರ ಮಾಡಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಆಕೆಯನ್ನು ಅವನು ಭುವನಗಿರಿಗೆ ಕರೆದೊಯ್ದಿದ್ದಾನೆ. ಅಲ್ಲಿಂದ ಇಬ್ಬರು ಯಾದಗಿರಿಗುಟ್ಟಕ್ಕೆ ಹೋಗಿಬಂದಿದ್ದಾರೆ. ದಾರಿ ಮಧ್ಯೆ ಕುಮಾರ್ ಮದ್ಯ ಖರೀದಿಸಿದ್ದು, ಏಕಾಂತದ ಸ್ಥಳವೊಂದಕ್ಕೆ ತಲುಪಿದ್ದಾರೆ.
ಏಕಾಂತದ ಸ್ಥಳದಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿದ ಕುಮಾರ್, ಆಕೆಯ ಕತ್ತನ್ನು ಬ್ಲೇಡಿನಿಂದ ಕತ್ತರಿಸಿದ್ದಾನೆ. ನಂತರ ಆಕೆಯನ್ನು ಅಲ್ಲಿಯೇ ಬಿಟ್ಟು ಮನೆಗೆ ತೆರಳಿದ್ದಾನೆ. ಮಹಿಳೆಯು ಕುಮಾರ್ಗೆ ತಿಳಿಸದೆಯೇ ಬೇರೊಂದು ಮದುವೆಯಾಗಿದ್ದಳು ಎನ್ನುವ ಶಂಕೆಯಿಂದ ಆತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಮಹಿಳೆಗೆ 22 ವರ್ಷದ ಮಗಳಿದ್ದು, ಆಕೆ ಕುಮಾರ್ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. (ಏಜೆನ್ಸೀಸ್)