

ಭೋಪಾಲ್: ಕಾಮುಕ ಮಗನೊಬ್ಬ ತನ್ನ ಮಲತಾಯಿಯ ಮೇಲೇ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಾನಕ್ಕೆ ಹೆದರಿದ ಕುಟುಂಬ, ಪೊಲೀಸ್ ದೂರನ್ನೂ ಕೂಡ ಕೊಡದಿರುವಂತೆ ಮಗಳನ್ನು ತಡೆದಿತ್ತು ಎನ್ನಲಾಗಿದೆ.
ಮಧ್ಯಪ್ರದೇಶದ ಭೋಪಾಲ್ ಮೂಲದ 24 ವರ್ಷದ ಮಹಿಳೆ ಕೆಲ ವರ್ಷಗಳ ಹಿಂದೆ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದರು. ಮೊದಲ ಹೆಂಡತಿ ತೀರಿಕೊಂಡಿದ್ದ ಆತನಿಗೆ ಅದು ಎರಡನೇ ಮದುವೆಯಾಗಿತ್ತು. ಮೊದಲನೇ ಹೆಂಡತಿಗೆ ಓರ್ವ ಮಗನನ್ನು ಹೊಂದಿರುವ ಆತ ಎರಡನೇ ಹೆಂಡತಿಗೆ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಮೂರು ವರ್ಷಗಳ ಹಿಂದೆ ಆತನೂ ಕೂಡ ಕೊನೆಯುಸಿರೆಳದಿದ್ದಾನೆ. ಆತನ ಮರಣದ ನಂತರ ಮಲತಾಯಿ, ತನ್ನ ಇಬ್ಬರು ಮಕ್ಕಳು ಮತ್ತು ತನ್ನ ಗಂಡನ ಮೊದಲನೇ ಹೆಂಡತಿಯ ಮಗನೊಂದಿಗೆ ಜೀವನವನ್ನು ನಡೆಸುತ್ತಿದ್ದಾಳೆ.
ಶುಕ್ರವಾರ ರಾತ್ರಿ ಮಕ್ಕಳನ್ನು ಕೋಣೆಯಲ್ಲಿ ಮಲಗಿಸಿ, ತನ್ನ ಕೋಣೆಯಲ್ಲಿ ಒಬ್ಬಂಟಿಯಾಗಿ ಮಲಗಿದ್ದ ಮಲತಾಯಿಯ ಮೇಲೆ ಮೊದಲನೇ ಹೆಂಡತಿಯ ಮಗ ದಾಳಿ ನಡೆಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಚಾರವನ್ನು ಯಾರೆದುರಾದರೂ ಬಾಯಿ ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ನೀಡಿದ್ದಾನೆ.
ಮರುದಿನ ಬೆಳಗ್ಗೆ ಧೈರ್ಯದಿಂದ ಮಹಿಳೆ ನಡೆದ ವಿಚಾರವನ್ನು ತನ್ನ ಕುಟುಂಬಸ್ಥರ ಮುಂದೆ ಹೇಳಿದ್ದಾಳೆ. ಆದರೆ ಮಾನಕ್ಕೆ ಅಂಜಿದ ಕುಟುಂಬ ಈ ವಿಚಾರವನ್ನು ನೀನು ಎಲ್ಲಿಯೂ ಹೇಳಬೇಡ, ಮರೆತುಬಿಡು ಎಂದು ಸಮಾಧಾನ ಮಾಡಿದೆ. ಪೊಲೀಸ್ ಠಾಣೆಗೆ ಹೋಗದಂತೆ ತಡೆಯದೆ. ಆದರೆ ಮನಸ್ಸು ತಾಳದ ಮಹಿಳೆ ಸೋಮವಾರದಂದು ಪೊಲೀಸ್ ಠಾಣೆಗೆ ಬಂದಿದ್ದು, ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್)