

ರಾಜಸ್ಥಾನ : ( Nose ) ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು, ಈ ಜಗಳಲದಲ್ಲಿ ಮಹಿಳೆಯೊಬ್ಬಳು ತನ್ನ ಕತ್ತರಿಸಿದ ಮೂಗನ್ನು ಬ್ಯಾಗ್ನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಜಾಲೋರ್‌ನ ಸೈಲಾ ಮೂಲದ 40 ವರ್ಷದ ಕುಕಿ ದೇವಿ ಎಂಬ ಮಹಿಳೆ ತನ್ನ ಕತ್ತರಿಸಿದ ಮೂಗನ್ನು ಚೀಲದಲ್ಲಿ ಹಾಕಿಕೊಂಡು ಬುಧವಾರ ಪಾಲಿನಲ್ಲಿರುವ ಆಸ್ಪತ್ರೆಗೆ ಹೋಗಿದ್ದಳು. ಕುಕಿ ದೇವಿ ಕಳೆದ ಕೆಲವು ದಿನಗಳಿಂದ ಸೈಲಾದ ಮೋಕ್ನಿ ಗ್ರಾಮದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯ ಚಿಕ್ಕಪ್ಪ ಮತ್ತು ಆಕೆಯ ಸೋದರಳಿಯ ನಡುವೆ ಗ್ರಾಮದಲ್ಲಿ ಜಮೀನಿನ ಬಗ್ಗೆ ಜಮೀನು ವಿವಾದವಿದೆ. ಜಮೀನು ವಿವಾದದಲ್ಲಿ ಸೋದರಳಿಯ ಮತ್ತು ಇತರ ಸಂಬಂಧಿಕರಿಂದ ಮೂಗು ( Nose ) ಕತ್ತರಿಸಿದ್ದಾರೆ.
ಕುಕಿ ದೇವಿ ತನ್ನ ಸೊಸೆ ಮತ್ತು ಮಗನೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸೋದರಳಿಯ ಜಗಳ ಮಾಡಿದ್ದಾನೆ. ಈ ವೇಳೆ ಮಾತಿಗೆ.. ಮಾತು ಮಾತು ಆಗಿ ಜಗಳ ನಡೆದಿದೆ. ಸೋದರಳಿಯ ಓಂಪ್ರಕಾಶ್ ಇತರ ಸಂಬಂಧಿಕರೊಂದಿಗೆ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹೊಡೆದಾಟದಲ್ಲಿ ಓಂಪ್ರಕಾಶ್ ಚಾಕುವಿನಿಂದ ಕುಕಿದೇವಿಯ ಮೂಗು ( Nose ) ಕೊಯ್ದಿದ್ದಾನೆ. ನಂತರ ಆಕೆ ಕತ್ತರಿಸಿದ ಮೂಗನ್ನು ಚೀಲದಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಪಾಲಿನಲ್ಲಿರುವ ಬಂಗಾರ್ ಆಸ್ಪತ್ರೆಗೆ ತೆರಳಿದ್ದಾಳೆ.
ಕುಕಿದೇವಿಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಗಾರ್ ಆಸ್ಪತ್ರೆಯ ಡಾ.ಜುಗಲ್ ಮಹೇಶ್ವರಿ ಅವರ ಮೂಗು ತೀವ್ರವಾಗಿ ಕತ್ತರಿಸಲ್ಪಟ್ಟಿದ್ದು, ಪ್ಲಾಸ್ಟಿಕ್ ಸರ್ಜರಿ ಮೂಲಕ ಮಾತ್ರ ಅದನ್ನು ಮರುಜೋಡಿಸಲು ಸಾಧ್ಯ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ತಕ್ಷಣ ಸೈಲಾ ಪೊಲೀಸರು ಕ್ರಮ ಕೈಗೊಂಡು ಪ್ರಮುಖ ಆರೋಪಿ ಓಂಪ್ರಕಾಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.