

ಬೆಂಗಳೂರು: ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಮೋಸ ಮಾಡಿರುವ ಕೆಲವು ಘಟನೆಗಳ ಕುರಿತಾಗಿ ಇಲ್ಲಿಯವರೆಗೂ ಕೇಳಿದ್ದೇವೆ. ಆದರೆ ಬೆಂಗಳೂರಿನ ಮಹಿಳೆಯೊಬ್ಬಳು ಮೊಟ್ಟೆ ಖರೀದಿ ಮಾಡಲು ಹೋಗಿ ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾಳೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸುವವರಿಗೆ ಪ್ರತಿಷ್ಠಿತ ಬ್ರಾಂಡ್‌ಗಳ ಹೆಸರಿನಲ್ಲಿ ರಿಯಾಯಿತಿಗಳನ್ನು ನೀಡುವ ಮೂಲಕ ಗ್ರಾಹಕರಿಗೆ ಮೋಸದ ಬಲೆ ಬಿಸಿದ್ದಾರೆ. ಕೇವಲ 49 ರೂ.ಗೆ ನಾಲ್ಕು ಡಜನ್ ಮೊಟ್ಟೆ ಪಡೆಯಲು ಪ್ರಯತ್ನಿಸಿದ 38 ವರ್ಷದ ಮಹಿಳ 48,000 ರೂ ಕಳೆದುಕೊಂಡು ಹೈ ಗೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಡೆದಿದ್ದೇನು?: ವಸಂತನಗರದ ನಿವಾಸಿ ಶಿವಾನಿ (ಕೋರಿಕೆಯ ಮೇರೆಗೆ ಹೆಸರು ಬದಲಾಯಿಸಲಾಗಿದೆ) ಫೆಬ್ರವರಿ 17 ರಂದು ಜನಪ್ರಿಯ ಕಂಪನಿಯೊಂದು ಅತಿ ಕಡಿಮೆ ಬೆಲೆಗೆ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದೆ ಎಂಬ ಇಮೇಲ್ ಜಾಹೀರಾತನ್ನು ನೋಡಿದ್ದಾರೆ. ಜಾಹೀರಾತಿನಲ್ಲಿ ಶಾಪಿಂಗ್ ಲಿಂಕ್ ಅನ್ನು ಉಲ್ಲೇಖಿಸಲಾಗಿದೆ. ಅದನ್ನು ಕ್ಲಿಕ್ ಮಾಡಿದಾಗ, ಕೋಳಿಗಳನ್ನು ಹೇಗೆ ಸಾಕಲಾಗುತ್ತದೆ ಮತ್ತು ಮೊಟ್ಟೆಗಳನ್ನು ಸಂಗ್ರಹಿಸಿ ವಿತರಿಸಲಾಗುತ್ತದೆ ಎಂಬುದರ ವಿವರಣೆ ನೀಡಿದ್ದಾರೆ. ಯಾವುದೇ ಡೆಲಿವರಿ ಶುಲ್ಕವಿಲ್ಲದೆ ಎಂಟು ಡಜನ್ ಮೊಟ್ಟೆಗಳನ್ನು 99 ರೂ.ಗೆ ಇರುವ ಆಫರ್ ನೋಡಿದ್ದಾಳೆ. ಮಹಿಳೆ ೪ ಡಜನ್ ಮೊಟ್ಟೆಗಳನ್ನು 49 ರೂ.ಗೆ ಖರೀದಿಸಿದ್ದಾಳೆ. ಮಹಿಳೆ ಆರ್ಡರ್ ಮಾಡಿದ್ದಾಳೆ. ಅಲ್ಲಿ ಕೇಳಿರುವ ಸಂಪೂರ್ಣ ವಿವರಗಳನ್ನು ನಮೂದಿಸಿ ಕ್ಲಿಕ್ ಮಾಡಿದ್ದಾಳೆ.
ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾತ್ರ ಪಾವತಿ ಆಯ್ಕೆ ನೀಡಲಾಗಿತ್ತು. ನಂತರ ಮೊಬೈಲ್ ಸಂಖ್ಯೆಗೆ ಬಂದಿರುವ OTP ಅನ್ನು ನಮೂದಿಸಿದ ಕ್ಷಣ ಮಾತ್ರದಲ್ಲೇ ಮಹಿಳೆ ಕ್ರೆಡಿಟ್ ಕಾರ್ಡ್ ಖಾತೆಯಿಂದ ಒಟ್ಟು 48,199 ರೂ ಹಣ ಕಟ್ ಆಗಿದೆ. ನಂತರ ಮಹಿಳೆಗೆ ಮೋಸ ಹೋಗಿರುವುದು ಅರವಿಗೆ ಬಂದಿದೆ. ನಂತರ ಸೈಬರ್ ಕ್ರೈಮ್ ಸಹಾಯವಾಣಿಗೆ (1930) ಕರೆ ಮಾಡಿ ದೂರು ನೀಡಿದ್ದಾರೆ.
ಶಿವಾನಿ ಕ್ರೆಡಿಟ್ ಕಾರ್ಡ್‌ನಲ್ಲಿ 3.7 ಲಕ್ಷ ರೂ.ಗಳ ಮಿತಿಯನ್ನು ಹೊಂದಿದ್ದು, ಕ್ರಾಸ್ ವೆರಿಫಿಕೇಶನ್‌ಗಾಗಿ ಬ್ಯಾಂಕ್‌ನಿಂದ ಕರೆ ಸ್ವೀಕರಿಸದಿದ್ದರೆ, ದುಷ್ಕರ್ಮಿಗಳು ಹೆಚ್ಚಿನ ಹಣವನ್ನು ದೋಚುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.