VIDEO| ಅಂಗಡಿ ಬಾಗಿಲು ಮುಚ್ಚಲು ಯತ್ನಿಸಿದ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಖಾರದ ಪುಡಿ ಎರಚಿದ ಮಹಿಳೆ

Woman chilli Powder
Published on

ಮುಂಬೈ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ಮುಂದುವರಿದಿವೆ. ಇದರ ನಡುವೆ ಅನೇಕರು ಸಿಎಎ ಬೆಂಬಲಿಸಿಯೂ ಜಾಥಗಳನ್ನು ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಿನ್ನೆ ಮಹಾರಾಷ್ಟ್ರದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಮಹಿಳೆಯೊಬ್ಬರು ಶಾಕ್​ ನೀಡಿದ್ದಾರೆ.

ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್​ ವಿರೋಧಿಸಿ ವಿವಿಧ ಸಂಘಟನೆಗಳು ನಿನ್ನೆ ಭಾರತ್​ ಬಂದ್​ಗೆ ನೀಡಿದ್ದವು. ಅದರಂತೆ ರಸ್ತೆಗಿಳಿದಿದ್ದ ಪ್ರತಿಭಟನಾಕಾರರು ಮುಂಬೈನ ಯವತ್ಮಾಲ್​ ಎಂಬಲ್ಲಿ ಅಂಗಡಿಯೊಂದರ ಬಾಗಿಲನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದರು.

ಈ ವೇಳೆ ಅಂಗಡಿ ಮಾಲಕಿ ಮತ್ತು ಪ್ರತಿಭಟನಾಕಾರರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಆದರೂ ಪ್ರತಿಭಟನಾ ಗುಂಪು ಅಂಗಡಿಯ ಬಾಗಿಲನ್ನು ಮುಚ್ಚಲು ಯತ್ನಿಸಿದಾಗ ಕುಪಿತಗೊಂಡ ಮಹಿಳೆ ಖಾರದ ಪುಡಿಯನ್ನು ತಂದು ಪ್ರತಿಭಟನಾಕಾರರಿಗೆ ಎರಚಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಅಂದಹಾಗೆ ನಿನ್ನೆ ಕರೆ ನೀಡಲಾಗಿದ್ದ ಭಾರತ್​ ಬಂದ್​ಗೆ ಎಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net