ಮಗಳ ನೋವು ನೋಡಲಾಗದೆ ಪತ್ನಿಯನ್ನು ಕೊಂದ; ಪುಟ್ಟ ಬಾಲಕಿಗೆ ಈಗ ಅಮ್ಮನೂ ಇಲ್ಲ, ಅಪ್ಪನೂ ಇಲ್ಲ

Lady killed 1 oct
Published on

ವಡೋದರ: 10 ವರ್ಷದ ಮಗಳಿಗೆ ಥಳಿಸುತ್ತಿದ್ದ ಪತ್ನಿಯನ್ನು ಈ ರೈತ ಹತ್ಯೆಗೈದಿದ್ದಾನೆ. ಗುಜರಾತ್​ನ ವಡೋದರಾದ ವಲಾವವ್​ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ನಿ ಮಂಜುಳಾರನ್ನು ಹತ್ಯೆಗೈದ ಆರೋಪಿ ಚಂದುನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುಳಾ ಅವರ ತಂದೆ ರಮೇಶ್​ ಪಾರ್ಮರ್​ ಅಳಿಯನ ವಿರುದ್ಧ ದೂರು ದಾಖಲಿಸಿದ್ದರು.

ಸೆಪ್ಟೆಂಬರ್​ 29ರಂದು 10 ವರ್ಷದ ಮಗಳಿಗೆ ಮಂಜುಳಾ ಹೊಡೆಯುತ್ತಿದ್ದರು. ಅಲ್ಲದೆ ನಿಂದಿಸುತ್ತಿದ್ದರು. ಕಲಿಕೆಯಲ್ಲಿ ಹಿಂದಿದ್ದ ಅವಳಿಗೆ ಮಂಜುಳಾ ಪದೇಪದೆ ಬೈಯುತ್ತಿದ್ದರು. ದಂಪತಿಯ ಏಕೈಕ ಪುತ್ರಿಯಾಗಿದ್ದ ಇವಳ ಬಗ್ಗೆ ಅಪ್ಪ ಚಂದುಗೆ ಜಾಸ್ತಿಯೇ ಪ್ರೀತಿಯಿತ್ತು.

ಸೆ.29ರಂದು ಮಗಳನ್ನು ಥಳಿಸುತ್ತಿದ್ದ ಪತ್ನಿಯ ಮೇಲೆ ಕೋಪಗೊಂಡ ಚಂದು ಮರದ ತುಂಡಿನಿಂದ ಹೊಡೆದಿದ್ದಾನೆ. ಆಗ ಮಂಜುಳಾ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಇವರಿಬ್ಬರ ಗಲಾಟೆ ಕೇಳಿ ಮನೆಯ ಬಳಿ ಆಗಮಿಸಿದ್ದ, ಗ್ರಾಮಸ್ಥರೆಲ್ಲ ಸೇರಿ ಮಂಜುಳಾರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನ ಆಗಲಿಲ್ಲ. ಸದ್ಯ ಪುಟ್ಟ ಬಾಲಕಿ ಅಮ್ಮನನ್ನು ಕಳೆದುಕೊಂಡಿದ್ದಾಳೆ..ಅಪ್ಪನೂ ಜೈಲುಪಾಲಾಗಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net