

ತಮಿಳುನಾಡು: ನಿನ್ನೆ (ಅ.06) ಮರೀನಾ ಬೀಚ್ನಲ್ಲಿ ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಏರ್ ಶೋಗೆ ಲಕ್ಷಾಂತರ ಜನರು ಸೇರಿದ್ದರು. ಈ ಕಾರ್ಯಕ್ರಮದಲ್ಲಿ ನಡೆದ ಒಂದು ಭೀಕರ ದುರಂತದಿಂದ (Chennai Airshow Tragedy)
ಇದೀಗ ಸಾವಿರಾರೂ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಇದನ್ನೂ ಓದಿ: ಮೈಸೂರಿನ ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಡ್ರೋನ್ ಶೋ
ಈ ದೊಡ್ಡ ಈವೆಂಟ್ನಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಜನರ ಪೈಕಿ ನಾಲ್ವರು ಅವಘಡದಲ್ಲಿ ಸಾವನ್ನಪ್ಪಿದ್ದು, 96ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಏರ್ ಶೋ ಕಣ್ತುಂಬಿಕೊಳ್ಳಲು ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಆಗಮಿಸಿದ್ದ ಕಾರ್ತಿಕೆಯನ್ (34) ಅವಘಡದಲ್ಲಿ ದುರಂತ ಅಂತ್ಯ ಕಂಡರು. ಈ ಘಟನೆ ನೆನೆದ ಪತ್ನಿ ಇದೀಗ ಗಂಡನ ಅನುಪಸ್ಥಿತಿಯನ್ನು ನೆನೆದು ಭಾವುಕಾಗಿದ್ದಾರೆ.
"ತಿರುವೊಟ್ರಿಯೂರ್ ನಿವಾಸಿಯಾದ ಕಾರ್ತಿಕೇಯನ್, ಅಲ್ಲಿಯೇ ಖಾಸಗಿ ಲಾಜಿಸ್ಟಿಕ್ಸ್ ಕಂಪನಿಯೊಂದರಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದರು. ಅಂದು ನಮ್ಮನೆಲ್ಲಾ ಏರ್ ಶೋ ನೋಡಲು ಲಕ್ಷಾಂತರ ಜನರ ಮಧ್ಯೆ ಬಹಳ ಖುಷಿ ಖುಷಿಯಿಂದ ಕರೆದುಕೊಂಡು ಬಂದರು. ದುರಂತ ಸಂಭವಿಸುವ ಮುನ್ನ ಅವರು ನನ್ನ ಮತ್ತು ಮಗುವನ್ನು ಬಸ್ ನಿಲ್ದಾಣದ ಹತ್ತಿರ ನಿಲ್ಲಲು ಹೇಳಿ, ಒಂದು ಕಿ.ಮೀ ದೂರದಲ್ಲಿ ನಿಲ್ಲಿಸಿದ್ದ ಬೈಕ್ ತರಲು ಹೋದರು. ಆಗ ಹೋದವರು ಮತ್ತೆ ಹಿಂತಿರುಗಿ ಬರಲೇ ಇಲ್ಲ" ಎಂದು ಕಾರ್ತಿಕೆಯನ್ ಪತ್ನಿ ಶಿವರಂಜನಿ ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).