

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಹಲವಾರು ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ, ವ್ಯಾಪಕ ಚರ್ಚೆಗೆ ಕಾರಣವಾಗುತ್ತದೆ. ಅದೇ ರೀತಿ ಇಲ್ಲೊಂದು ದೃಶ್ಯ ನೋಡುಗರನ್ನು ಭಾರೀ ಅಚ್ಚರಿಗೆ ದೂಡಿದ್ದು, ಯುವತಿಯರಿಬ್ಬರು ಪೆಟ್ರೋಲ್ ಬಂಕ್ನ ಉದ್ಯೋಗಿ ಜತೆಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ: ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಕಾಂಗ್ರೆಸ್ ಬೆಂಬಲ
ಪೆಟ್ರೋಲ್ ಬಂಕ್ಗೆ ಬಂದ ಯುವತಿಯರಿಬ್ಬರು ಉದ್ಯೋಗಿ ಜತೆಗೆ ಕೆಲವು ನಿಮಿಷ ವಾಗ್ವಾದ ನಡೆಸಿದ್ದು, ಬಳಿಕ ಏಕಾಏಕಿ ಆತನ ಮುಂದೆ ಹೋಗಿ, ತನ್ನ ಪ್ಯಾಂಟ್ನ ಕಳಚಿದ್ದಾಳೆ. ನಂತರ ಆತ ಬೇರೆ ಯಾವುದೋ ವಿಷಯ ಹೇಳುತ್ತಿರುವಂತೆ ವಿಡಿಯೋದಲ್ಲಿ ಕಂಡುಬಂದಿದೆ. ತಕ್ಷಣ ಯುವತಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಈ ವಿಡಿಯೋ ನೋಡಿದ ಅನೇಕರು ಇಂತಹ ಅಸಭ್ಯ ವರ್ತನೆಗೆ ಕಾರಣವೇನು ಎಂದು ಕಮೆಂಟ್ನಲ್ಲಿ ಪ್ರಶ್ನಿಸಿದ್ದಾರೆ.
ವೈರಲ್ ವಿಡಿಯೋ ಹಿಂದಿನ ಅಸಲಿ ಕಾರಣವೇನು? ಯುವತಿಯರ ಅಸಭ್ಯ ವರ್ತನೆಯನ್ನು ಪೆಟ್ರೋಲ್ ಬಂಕ್ ಮಾಲೀಕರು ಪ್ರಶ್ನಿಸಿದ್ರಾ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಲಭಿಸಿಲ್ಲ. ಕೆಲವರು ಇಂತಹ ಘಟನೆಗಳಿಗೆ ಅವಕಾಶ ಕೊಡಬಾರದು, ಅವರನ್ನು ಹುಡುಕಿ ತಕ್ಕ ಶಿಕ್ಷೆ ವಿಧಿಸಬೇಕು. ಮುಂದೆ ಇನ್ನೆಲ್ಲೂ ಇಂತಹ ತಪ್ಪು ಮಾಡಬಾರದು, ಹಾಗೇ ಬುದ್ದಿ ಕಲಿಸಬೇಕು ಎಂದು ಕಮೆಂಟ್ ಮೂಲಕ ವಿಡಿಯೋ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).