4 ವರ್ಷ ಗಂಡನ ಶವದ ಜತೆ ಮಲಗಿದ ಪತ್ನಿ; ಪತಿ ಮತ್ತೆ ಎದ್ದು ಬರ್ತಾನೆಂಬ ನಂಬಿಕೆ

Woman Slept With Husbands Mummified Corpse For 4 Years
Published on

ರಷ್ಯಾ: ದಂಪತಿ ನಡುವೆ ಇರುವ ಪ್ರೀತಿ, ಬಾಂಧವ್ಯವನ್ನು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವೆ ಇಲ್ಲ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಸಂಸಾರವನ್ನು ತಲೆಕೆಳಗೆ ಮಾಡುತ್ತವೆ. ಆದರೆ ಗಂಡ-ಹೆಂಡತಿ ನಡುವೆ ಇರುವ ಪ್ರೀತಿ ಮಾತ್ರ ಸತ್ಯವಾಗಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಮಹಿಳೆಯೊಬ್ಬಳು ಪತಿ ಸತ್ತು ನಾಲ್ಕು ವರ್ಷ ಕಳೆದಿದ್ದರು ಆತ ಶವದ ಜತೆ ಸಂಸಾರ ನಡೆಸಿದ್ದಾಳೆ. ನಂಬಲು ಅಸಾಧ್ಯವಾಗಿದ್ದರು ಇದು ಸತ್ಯ.

ಮಹಿಳೆಯೊಬ್ಬರು ನಾಲ್ಕು ವರ್ಷಗಳ ಕಾಲ ತನ್ನ ಪತಿಯ ಶವದೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾರೆ. 50 ವರ್ಷದ ಸ್ವೆಟ್ಲಾನಾ ಎಂಬ ಮಹಿಳೆ ತನ್ನ ಗಂಡನ ಶವವನ್ನು ತಮ್ಮ ಹಾಸಿಗೆಯಲ್ಲಿ ಇಟ್ಟುಕೊಂಡಿದ್ದಾಳೆ ಮತ್ತು ಯಾರಿಗೂ ಹೇಳದಂತೆ ತನ್ನ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾಳೆ.

50 ವರ್ಷದ ಸ್ವೆಟ್ಲಾನಾ ಎಂಬ ಮಹಿಳೆ ಪತಿ 49 ವರ್ಷದ ವ್ಲಾಡಿಮಿರ್‌. ವ್ಲಾಡಿಮಿರ್ ನಾಲ್ಕು ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದ. ಆತನ ಶವವನ್ನು ಸ್ವೆಟ್ಲಾನಾ ಕಂಬಳಿಯಲ್ಲಿ ಸುತ್ತಿ ತನ್ನ ಹಾಸಿಗೆ ಮೇಲೆ ಇಟ್ಟಿದ್ದಳು. ತಂದೆ ಶವದ ಬಗ್ಗೆ ಹೊರಗೆ ಮಾಹಿತಿ ನೀಡಿದ್ರೆ ನಿಮ್ಮನ್ನು ಅನಾಥಾಶ್ರಮದಲ್ಲಿ ಬಿಟ್ಟು ಬರೋದಾಗಿ ಮಕ್ಕಳಿಗೆ ಬೆದರಿಕೆ ಹಾಕಿದ್ದಳು. ಪತಿ ಮತ್ತೆ ಎದ್ದು ಬರ್ತಾನೆ ಎಂಬ ನಂಬಿಕೆ ಆಕೆಗಿತ್ತು. ಇಬ್ಬರು ಒಬ್ಬರನ್ನೊಬ್ಬರು ಪ್ರತಿ ದಿನ ನೋಡ್ಬಹುದು ಎನ್ನುವ ಕಾರಣಕ್ಕೆ ಶವವನ್ನು ಹಾಸಿಗೆ ಮೇಲೆ ಇಟ್ಟುಕೊಂಡಿದ್ದಳು.

ಸಾಮಾಜಿಕ ಕಾರ್ಯಕರ್ತರು ಮನೆಗೆ ಬಂದಿದ್ದಾರೆ ಈ ವೇಳೆ ಮನೆಯಲ್ಲಿ ಸ್ಲೆಟ್ಲಾನಾ, 17 ಮತ್ತು 8 ವರ್ಷದ ಇಬ್ಬರು ಹೆಣ್ಣುಮಕ್ಕಳು, 11 ವರ್ಷದ ಅವಳಿ ಗಂಡು ಮಕ್ಕಳ ಜೊತೆ ವಾಸವಾಗಿದ್ದಾಳೆ. ಹಿಂದೆ ಅಲ್ಲಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತರು ಬೆಡ್ ಮೇಲಿದ್ದ ಶವದ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಈ ಬಾರಿ ಸಾಮಾಜಿಕ ಕಾರ್ಯಕರ್ತರು ಶವ ಇರುವುದನ್ನು ಅರಿತುಕೊಂಡಿದ್ದಾರೆ.  ಮನೆಯಲ್ಲಿ ತಾಯತಗಳು, ತಲೆಬುರುಡೆಗಳು ಮತ್ತು ಸತ್ತವರ ಪ್ರಾಚೀನ ಈಜಿಪ್ಟಿನ ದೇವರು ಅನುಬಿಸ್‌ನ ಸೇರಿದಂಯೆ ಹಲವಾರು ಚಿತ್ರ, ಅನೇಕ ನಿಗೂಢ ವಸ್ತುಗಳಿಂದ ತುಂಬಿತ್ತು ಎಂದು ವರದಿ ಮಾಡಲಾಗಿದೆ. ಸದ್ಯ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸೂಕ್ತ ಕ್ರಮಕೈಗೊಂಡಿದ್ದಾರೆ.

ಸ್ವೆಟ್ಲಾನಾ ಪತಿ ವ್ಲಾಡಿಮಿರ್ ನಿಧನಕ್ಕಿಂತ ಮೊದಲು ಪತಿ – ಪತ್ನಿ ಮಧ್ಯೆ ಜಗಳ ನಡೆದಿತ್ತಂತೆ. ಈ ಸಮಯದಲ್ಲಿ ಕೋಪಗೊಂಡ ಪತ್ನಿ ಸ್ವೆಟ್ಲಾನಾ, ಸತ್ತೋಗು ಅಂತಾ ಶಾಪ ಹಾಕಿದ್ದಳು. ಆಕೆ ಬಾಯಿಂದ ಈ ವಿಷ್ಯ ಹೊರಗೆ ಬರ್ತಿದ್ದಂತೆ ವ್ಲಾಡಿಮಿರ್ ತಲೆ ಸುತ್ತಿ ಬಿದ್ದಿದ್ದ. ಅಲ್ಲಿಯೇ ಸಾವನ್ನಪ್ಪಿದ್ದ ಎಂದು ಕೆಲ ಮಾಧ್ಯಮಗಳ ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net