ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಲವ್ ಸ್ಟೋರಿ ಮದುವೆಯಲ್ಲಿ ಮುಕ್ತಾಯ

marriage
Published on

ನವದೆಹಲಿ: ಹೆಚ್ಚಿನ ಯುವತಿಯರು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಯುವಕರಿಂದ ಸ್ವೀಕರಿಸುವ ನೇರ ಸಂದೇಶಗಳನ್ನು (DM) ನಿರ್ಲಕ್ಷಿಸುತ್ತಾರೆ. ಆದರೆ ಕೆಲವರು ಮಾತ್ರ ಪ್ರತಿಕ್ರಿಯಿಸುತ್ತಾರೆ. ಇದೀಗ ಇಂತಹ ಸಂದೇಶವೊಂದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಭೇಟಿ ಮದುವೆಯಲ್ಲಿ ಕೊನೆಗೊಂಡಿದೆ.

ಹೌದು, ಈಗ ವೈರಲ್ ಆಗಿರುವ ಪೋಸ್ಟ್‌ನಲ್ಲಿ, X ಬಳಕೆದಾರ @samxrzraf ತನ್ನ ಪತಿ ಐದು ವರ್ಷಗಳ ಹಿಂದೆ ಕಳುಹಿಸಿದ DM ನ ಸ್ಕ್ರೀನ್‌ಶಾಟ್ ಅನ್ನು ತಮ್ಮ ಮದುವೆಯ ದಿನದಂದು ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋ ಹಂಚಿಕೊಳ್ಳುವಾಗ, @samxrzraf "ಅವರು ನಿಜವಾಗಿಯೂ ನನ್ನನ್ನು ಇಷ್ಟಪಟ್ಟಿದ್ದಾರೆ" ಎಂದು ಬರೆದಿದ್ದಾರೆ. ಈ ಪೋಸ್ಟ್ ಇದುವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.

ಈ ಪೋಸ್ಟ್​​​ಗೆ ಕಾಮೆಂಟ್ ಮಾಡುತ್ತಾ, ಒಬ್ಬ X ಬಳಕೆದಾರ ತಮಾಷೆಯಾಗಿ, "ನನ್ನನ್ನು ನಿಜವಾಗಿಯೂ ಇಷ್ಟಪಡುವ ಯಾರಾದರೂ ದಯವಿಟ್ಟು ತಿಳಿಸಿ" ಎಂದು ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಲವ್ ಸ್ಟೋರಿ ಈಗ ಮದುವೆಯಲ್ಲಿ ಮುಕ್ತಾಯವಾಗಿದೆ. ಜನವರಿಯಲ್ಲಿ, ಸಾರಾ ವೀವರ್ ಎಂಬ US ಮಹಿಳೆ X ನಲ್ಲಿ ನೇರ ಸಂದೇಶದಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹೇಗೆ ನಿಶ್ಚಿತಾರ್ಥ ಮಾಡಿಕೊಂಡಳು ಎಂದು ಹಂಚಿಕೊಂಡಿದ್ದರು. ವೀವರ್ ಭಾವಿ ಪತಿಯೊಂದಿಗೆ ಛಾಯಾಚಿತ್ರವನ್ನು ಹಂಚಿಕೊಂಡಿದ್ದಲ್ಲದೆ, ಅವರು ಕಳುಹಿಸಿದ ಮೊದಲ DM ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net