'ದುಬೈನಲ್ಲಿ ಲಕ್ಷ ರೂ. ಸಂಬಳದ ಕೆಲಸ, ಆದ್ರೆ ಸಂತೋಷವಿಲ್ಲ, ಬೆಂಗಳೂರಲ್ಲಿಯೇ ಚೆನ್ನಾಗಿದ್ದೆ' ಬೇಸರ ಹೊರ ಹಾಕಿದ ಯುವತಿ..Bengaluru woman

viral video
Published on

Bengaluru woman: ಕಡಿಮೆ ಸಂಬಳ ಇದ್ರೆ ನೆಮ್ಮದಿ ಇರುತ್ತದೆ. ಸಂಬಳ ಹೆಚ್ಚಾದಂತೆ, ಕೆಲಸದ ಹೊರೆ ಮತ್ತು ಒತ್ತಡ ಹೆಚ್ಚಾಗುತ್ತದೆ ಎಂದು ದುಬೈನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಯುವತಿ ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿ ಬೇಸರ ಹೊರ ಹಾಕಿದ್ದಾಳೆ.

ಸೀಮಾ ಪುರೋಹಿತ್ ಆಗಿರುವ ನಾನು ಬೆಂಗಳೂರಿನಲ್ಲಿ ಮೊದಲು ಕೆಲಸ ಮಾಡಲು ಪ್ರಾರಂಭಿಸಿದಾಗ ತನ್ನ ಸಂಬಳ ತಿಂಗಳಿಗೆ 18,000 ರೂ. ಆಗಿತ್ತು. ಆ ಸಮಯದಲ್ಲಿ ತಾನು ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ಭಾವಿಸಿದೆ.

ಇದನ್ನೂ ಓದಿ: ಪತ್ರಿಕಾಗೋಷ್ಟಿಯಲ್ಲಿ ತಂಬಾಕು ಸೇವನೆಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟ ಅಕ್ಷಯ್​ ಕುಮಾರ್​|Bollywood, ಪಿಜಿ, ಶಾಪಿಂಗ್ ಮಾಡುವುದು, ಹೊರಗೆ ಊಟ ಮಾಡುವುದು, ವಾರಾಂತ್ಯದಲ್ಲಿ ಕ್ಲಬ್‌ಗೆ ಹೋಗುವುದು ಇತ್ಯಾದಿಗಳೆಲ್ಲವೂ ಈ ಸೀಮಿತ ಸಂಬಳದಲ್ಲಿಯೇ ಮಾಡಲಾಗುತ್ತಿತ್ತು. ಆಗ ತುಂಬಾ ಸಂತೋಷವಾಗಿದ್ದೇನು.

ಪ್ರಸ್ತುತ ದುಬೈ ಜೀವನವನ್ನು ಬೆಂಗಳೂರಿನ ಜೀವನಕ್ಕೆ ಹೋಲಿಸಿದರೆ ದುಬೈನಲ್ಲಿ ಹೆಚ್ಚಿನ ಸಂಬಳದ ಕೆಲಸ ಮೊದಲು ಸಂತೋಷವನ್ನು ನೀಡಿತು. ತಾನು ಕಡಿಮೆ ತೃಪ್ತಿ ಹೊಂದಿದ್ದೇನೆ ಮತ್ತು ಹೆಚ್ಚಿನ ಸಂಬಳಕ್ಕಾಗಿ ತನ್ನ ಮೊದಲ ಕೆಲಸವನ್ನು ಬಿಟ್ಟು ದುಬೈಗೆ ಏಕೆ ಬಂದೆ ಎಂದು ಆಗಾಗ್ಗೆ ಆಶ್ಚರ್ಯ ಪಡುತ್ತೇನೆ ಎಂದು ಯುವತಿ ಹೇಳಿದ್ದಾಳೆ.

 ಇನ್​ಸ್ಟಾಗ್ರಾಮ್​​ನಲ್ಲಿ ಈ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಗಮನ ಸೆಳೆಯಿತು. ಯುವತಿಯ ಅಭಿಪ್ರಾಯವನ್ನು ಅನೇಕ ಜನರು ಒಪ್ಪಿಕೊಂಡಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ  ಅನೇಕರು  ಕಾಮೆಂಟ್​​ ಮಾಡುವ ಮೂಲಕವಾಗಿ ತಮ್ಮ ಬೇಸರ, ನೋವು, ಖುಷಿ ಹೊರ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net