ಸ್ಮಗ್ಲರ್ ಮಹಿಳೆಯ ಬಂಧನ; ಗುದನಾಳದಲ್ಲಿತ್ತು 1 ಕೆ.ಜಿ.ಗೂ ಅಧಿಕ ಚಿನ್ನ!

Arrest
Published on

ಹೈದರಾಬಾದ್​: ಚಿನ್ನ ಕಳ್ಳ ಸಾಗಣೆಯಲ್ಲಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದು, ಆಕೆಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೈದರಾಬಾದ್​​ನಲ್ಲಿನ ವಿಮಾನ ನಿಲ್ದಾಣದಲ್ಲಿ ಈ ಸ್ಮಗ್ಲರ್ ಸಿಕ್ಕಿಬಿದ್ದಿದ್ದಾಳೆ.

ದುಬೈನಿಂದ ಆಗಮಿಸಿದ್ದ ವಿಮಾನದಿಂದ ಇಳಿದು ಹೊರಬರುತ್ತಿದ್ದ ಈಕೆಯನ್ನು ಹೈದರಾಬಾದ್​​ ವಿಮಾನನಿಲ್ದಾಣದಲ್ಲಿದ್ದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ. ಆಗ ಅನುಮಾನ ಬಂದು ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದು ಖಚಿತ ಪಟ್ಟಿದೆ.

ಈಕೆಯ ಗುದನಾಳದಲ್ಲಿ 1,237 ಗ್ರಾಂ ಚಿನ್ನ ಇರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಈಕೆಯವನ್ನು ವಶಕ್ಕೆ ಪಡೆದು, ಚಿನ್ನವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಚಿನ್ನದ ಮೊತ್ತ 64.38 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಪ್ರಮಾಣದ ಚಿನ್ನ ಎಲ್ಲಿಂದ ಬಂತು, ಯಾರು ಕೊಟ್ಟರು, ಎಲ್ಲಿಗೆ ತಲುಪಿಸುವುದಿತ್ತು ಎಂಬಿತ್ಯಾದಿ ವಿಚಾರವಾಗಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net