

ಜೈಪುರ: ಭಾರತೀಯ ಸಂಸ್ಕೃತಿಯಲ್ಲಿ ಮದುವೆಗಳನ್ನು ಯಾವಾಗಲೂ ಅತ್ಯಂತ ಪವಿತ್ರ ಸಂಬಂಧವೆಂದು ಪರಿಗಣಿಸಲಾಗಿದೆ. ಸಂತೋಷದ ವೈವಾಹಿಕ ಜೀವನವನ್ನು ರೂಪಿಸುವ ಯಾವುದೇ ವಿಶಾಲವಾದ ವ್ಯಾಖ್ಯಾನಗಳಿಲ್ಲ. ಈ ಪರಿಸ್ಥಿತಿಯಲ್ಲಿ ವಿವಿಧ ಗೊಂದಲಗಳು ಮತ್ತು ಬಗೆಹರಿಯದ ಸಮಸ್ಯೆಗಳಿಂದ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಇಂತಹದ್ದೇ ಘಟನೆ ನಡೆದಿದೆ.
ವಿವಾಹಿತ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಸರ್ವಾಡಿ ಗ್ರಾಮದಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಾರ್ಮರ್ ಜಿಲ್ಲೆಯ ಸರ್ವದಿ ಗ್ರಾಮದ ವ್ಯಕ್ತಿಯೊಬ್ಬರು ಅದೇ ಗ್ರಾಮದ ಮಹಿಳೆಯೊಂದಿಗೆ ಪರಿಚಯವಾಗಿತ್ತು. ಈ ಸಂಪರ್ಕ ಅನೈತಿಕ ಸಂಬಂಧಕ್ಕೆ ಕಾರಣವಾಗಿತ್ತು. ಗುಟ್ಟಾಗಿ ನಡೆಯುತ್ತಿದ್ದ ಇವರಿಬ್ಬರ ಸಂಬಂಧ ಕೆಲ ವರ್ಷಗಳ ನಂತರ ಹೊರಬಿದ್ದಿತ್ತು. ಇಂತಂಹ ಸಂಬಂಧಗಳಿಗೆ ಅಂತ್ಯವಾಡಬೇಕು ಎಂದು ಎರಡೂ ಕುಟುಂಬಗಳಿಗೂ ಎಚ್ಚರಿಕೆ ಸಹ ನೀಡಲಾಗಿತ್ತು.
ಈ ಎಚ್ಚರಿಕೆಗಳಿಗೆ ಕ್ಯಾರೆ ಎನ್ನದೆ ಪುನಃ ಒಂದಾಗುತ್ತಿದ್ದರು. ಈ ಸುದ್ದಿ ತಿಳಿದು ಕೋಪಗೊಂಡ ಕುಟುಂಬಸ್ಥರು ಮಹಿಳೆಯ ಮೇಲೆ ಹಲ್ಲೆ ಮಾಡಿ ಮನಬಂದಂತೆ ಥಳಿಸಿ ಅರೆಬೆತ್ತೆಲೆಯಾಗಿ ಮರವಣಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಅರೆಬೆತ್ತಲೆಯಾಗಿ ಕೂದಲು ಹಿಡಿದು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
ಈ ಸಂಬಂಧ ಸಂದಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.