

ನವದೆಹಲಿ: ( Finally divorced ) ಮಹಿಳೆಯೊಬ್ಬರು ಡೈವೋರ್ಸ್ ಪಡೆದ ನಂತರ ತಮ್ಮ ವೈವಾಹಿಕ ಜೀವನದ ಕಥೆಯನ್ನು ವಿಚ್ಛೇದನದ ಮೆಹಂದಿ ವಿನ್ಯಾಸದ ಮೂಲಕ ನೆಟಿಜನ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹುಟ್ಟುಹಬ್ಬ, ಹಬ್ಬ ಹರಿದಿನ, ಮದುವೆ ಹೀಗೆ ಯಾವುದೇ ಶುಭ ವಿಷಯಗಳು ಬಂದರೂ ವಯೋಮಾನದ ಭೇದವಿಲ್ಲದೆ ಕೈಗೆ ಮೆಹಂದಿ ಹಾಕಿಕೊಳ್ಳುತ್ತಾರೆ. ಮದುವೆಯ ಸಮಯದಲ್ಲಿ, ವಧು ಮತ್ತು ಮನೆಯ ಮಹಿಳೆಯರ ಕೈಗೆ ಮೆಹಂದಿ ಕಾರ್ಯಕ್ರಮವನ್ನು ವಿಶೇಷ ನಡೆಸಲಾಗುತ್ತದೆ. ಆದರೆ, ಇದೀಗ ವಿಚ್ಛೇದನದ ಮೆಹಂದಿ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಊರ್ವಶಿ ವೋರಾ ಶರ್ಮಾ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮ ಹ್ಯಾಂಡಲ್ Instagram ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಿಳೆಯೊಬ್ಬಳು ತನ್ನ ಕೈಗಳಲ್ಲಿ ಮೆಹಂದಿ ವಿನ್ಯಾಸದ ಮೂಲಕ ತನ್ನ ಮುರಿದು ಬಿದ್ದ ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾಳೆ. ( Finally divorced ) 'ಅಂತಿಮವಾಗಿ ವಿಚ್ಛೇದನ' ಎಂದು ಬರೆದುಕೊಂಡು ಮೆಹಂದಿ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಾಳೆ.
ಯುವತಿ ತನ್ನು ಕೈ ಮೇಲೆ ಹಾಕಿರುವ ಮೆಹಂದಿಯ ವಿನ್ಯಾಸದಲ್ಲಿ ತನಗೆ ಪತಿಯಿಂದ ಯಾವುದೇ ಬೆಂಬಲವಿಲ್ಲ ಎಂದು ಹೇಳಿದರು. ಈ ವಿನ್ಯಾಸವು ಮೊದಲ ಮದುವೆ, ನಂತರ ಜಗಳಗಳು, ಸಂಗಾತಿಯ ಬೆಂಬಲದ ಕೊರತೆ, ಹೃದಯಾಘಾತ ಮತ್ತು ಅಂತಿಮವಾಗಿ ವಿಚ್ಛೇದನವನ್ನು ಚಿತ್ರಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಕಾಮೆಂಟ್ ಮಾಡುವ ಮೂಲಕವಾಗಿ ಕೂಡ ಈ ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.