ಮಗಳನ್ನು ಪತಿಯ ಮನೆಗೆ ಬಿಡಲು ಬಂದ ಮಹಿಳೆ ಅಳಿಯನಿಂದಲೇ ಹತ್ಯೆಯಾದರು...

Dead Body
Published on

ಕಲಬುರಗಿ: ಮಗಳನ್ನು ಆಕೆಯ ಗಂಡನ ಮನೆಗೆ ಬಿಡಲು ಬಂದಿದ್ದ ಮಹಿಳೆ ಅಳಿಯನಿಂದಲೇ ಹತ್ಯೆಗೀಡಾಗಿದ್ದಾರೆ.

ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀಬಾಯಿ (45) ಮೃತೆ. ಅಳಿಯ ಈಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ತವರು ಮನೆಗೆ ಬಂದಿದ್ದ ಮಗಳನ್ನು ಆಕೆಯ ಗಂಡನ ಮನೆಗೆ ಬಿಡಲು ತನ್ನೂರಾದ ಭಾಲ್ಕಿಯಿಂದ ಭೀಮನಾಳ ಗ್ರಾಮಕ್ಕೆ ಬಂದಿದ್ದರು. ನಂತರ ಲಕ್ಷ್ಮೀಬಾಯಿ ಹಾಗೂ ಅಳಿಯನ ನಡುವೆ ಗಲಾಟೆ ಆಗಿದೆ. ರೊಚ್ಚಿಗೆದ್ದ ಅಳಿಯ ಅತ್ತೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net