ಮಹಿಳೆಯ ಕೈಕಾಲು ತುಂಡರಿಸಿ ಪೇಪರ್‌ನಲ್ಲಿ ಸುತ್ತಿ ಎಸೆದ ದುಷ್ಕರ್ಮಿಗಳು!

murder
Published on

ಚಂಡೀಗಢ: ಮಹಿಳೆಯನ್ನು ತುಂಡುತುಂಡು ಮಾಡಿ ಭೀಕರವಾಗಿ ಕೊಲೆ ಮಾಡಿ ಆಕೆಯ ಜತೆಗೆ ಭ್ರೂಣವನ್ನೂ ಪೊದೆಯೊಳಕ್ಕೆ ಎಸೆದು ಹೋಗಿರುವ ಭಯಾನಕ ಘಟನೆ ಚಂಡೀಗಢದಲ್ಲಿ ನಡೆದಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೆಕ್ಟರ್‌ 17ರಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಕೈ ಕಾಲುಗಳನ್ನು ತುಂಡರಿಸಿ ಪತ್ರಿಕೆಯೊಂದರಲ್ಲಿ ಸುತ್ತಿ ಅಲ್ಲಿ ಎಸೆದು ಹೋಗಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮ್ಯಾನೇಜರ್ ಅವರು ಊಟದ ವಿರಾಮದ ಸಮಯದಲ್ಲಿ ಸೈಕಲ್ ಟ್ರ್ಯಾಕ್‌ನಲ್ಲಿ ನಡೆಯುತ್ತಿರುವಾಗ ಅಲ್ಲಿ ಕೈ ಮತ್ತು ಕಾಲುಗಳನ್ನು ಗಮನಿಸಿದರು. ಅವುಗಳನ್ನು ಪತ್ರಿಕೆಯೊಂದರಲ್ಲಿ ಸುತ್ತಿಡಲಾಗಿತ್ತು. ಇದನ್ನು ಕಂಡು ಭಯಭೀತರಾದ ಅವರು, ಪೊಲೀಸರಿಗೆ ವಿಷಯ ತಿಳಿಸಿದರು.

ಅಲ್ಲೇ ಸಮೀಪದಲ್ಲಿಯೇ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಭ್ರೂಣವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಒಂದೆರಡು ದಿನಗಳ ಹಿಂದಷ್ಟೇ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net