ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನ ತಂದೆಯನ್ನೇ ಮದುವೆಯಾದ ಯುವತಿ!

Marriage
Published on

ನವದೆಹಲಿ: ಲವ್​ ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನ ತಂದೆಯನ್ನೇ ಮದುವೆಯಾಗಿರುವ ಚಿತ್ರ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇತ್ತೀಚೆಗೆ ಯುವತಿಯೊಬ್ಬಳು ಟಿಕ್​ಟಾಕ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿ, ಅದರಲ್ಲಿ ತನ್ನ ಸಹೋದರನ ಮಾಜಿ ಪ್ರೇಯಸಿ ಸೇಡು ತೀರಿಸಿಕೊಂಡ ಬಗೆಯನ್ನು ವಿವರಿಸಿದ್ದಾಳೆ.

ನನ್ನ ಸಹೋದರ ಲವ್​ ಬ್ರೇಕಪ್​ ಮಾಡಿಕೊಂಡ. ಇದರ ಪ್ರತೀಕಾರವಾಗಿ ಪ್ರೇಯಸಿ ನಮ್ಮ ತಂದೆಯನ್ನೇ ಮದುವೆ ಮಾಡಿಕೊಂಡಿದ್ದಾರೆ. ಇದೀಗ ನಮ್ಮ ಮಲತಾಯಿ ಆಗಿದ್ದಾರೆ. ಅಲ್ಲದೆ, ನನ್ನ ಸಹೋದರನಿಗೆ ಮತ್ತೊಂದು ಮದುವೆಯ ಪ್ರಸ್ತಾಪ ಬಂದಾಗ, ಆಕೆಗೆ ಎಲ್ಲವನ್ನು ಮೊದಲು ತಿಳಿಸಬೇಕು ಎಂಬ ನಿಯಮವನ್ನು ಹಾಕಿ ಮನೆಯಲ್ಲಿ ಸಮಸ್ಯೆ ತಂದಿಟ್ಟಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

Girl

ಇದಿಷ್ಟೇ ಅಲ್ಲದೆ ತನ್ನ ಸಹೋದರನ ಮದುವೆಯ ಸ್ಥಳದಲ್ಲಿ ವಧುವಿಗೆ ಮಾತ್ರ ಬಿಳಿ ಬಟ್ಟೆಯನ್ನು ಧರಿಸಲು ಅವಕಾಶವಿತ್ತು. ಆದರೆ, ಮಲತಾಯಿಯಾಗಿ ಬಂದವಳು ಮದುವೆಯ ದಿನ ಬಿಳಿ ಉಡುಪು ಹಾಕಿಕೊಂಡು ಫೋಟೋ ತೆಗೆಸಿಕೊಳ್ಳಲು ನಿಂತುಕೊಂಡಳು ಎಂದು ಯುವತಿ ಹೇಳಿಕೊಂಡಿದ್ದಾಳೆ. ಅಲ್ಲದೆ, ಮಾಜಿ ಪ್ರಿಯಕರನನ್ನು ಮಗನೇ ಎಂದು ಕರೆಯುತ್ತಾಳಂತೆ. ಅಲ್ಲದೆ, ಏನೇ ಮಾಡಿದರೂ ಎಲ್ಲದಕ್ಕೂ ನಿಯಮ ವಿಧಿಸುತ್ತಾರೆ ಎಂದು ಯುವತಿ ತನ್ನ ಸಹೋದರನ ನೋವನ್ನು ಬಿಚ್ಚಿಟ್ಟಿದ್ದಾಳೆ.

ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಾಮೆಂಟ್​ ವಿಭಾಗದಲ್ಲಿ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ತನ್ನ ಮಾಜಿ ಗೆಳತಿಯನ್ನೇ ಮದುವೆಯಾಗಿರುವ ತನ್ನ ತಂದೆಯೊಂದಿಗೆ ಆ ಯುವಕ ಇನ್ನೂ ಹೇಗೆ ತಾನೇ ಮಾತನಾಡಲು ಸಾಧ್ಯ ಎಂದು ಹಲವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net