ಈಕೆ ನಿತ್ಯ ಮದುಮಗಳು.. ಎಷ್ಟು ಮದುವೆಯಾಗಿದ್ದಾಳೆ ಗೊತ್ತಾ? ಡಿವೈಎಸ್ಪಿ, ಎಸ್ಪಿ ಸಹ ಪತಿಗಳಾಗಿದ್ದವರೇ!

marriage
Published on

ಚೆನ್ನೈ: ಹುಡುಗಿಯರನ್ನು ವಂಚಿಸಿ ಮದುವೆಯಾದ ಗಂಡುಮಕ್ಕಳನ್ನು ನೋಡಿದ್ದೇವೆ. ಆದರೆ ಹುಡುಗರನ್ನು ಟಾರ್ಗೆಟ್​ ಮಾಡಿ ಒಂದಲ್ಲ, ಎರಡಲ್ಲ.. ಏ 50 ಮಂದಿಯನ್ನು ಮದುವೆಯಾದ ಚತುರೆ ಬಗ್ಗೆ ಕೇಳಿದ್ದೀರಾ? ಹೌದು ಆಕೆಯ ಆಧಾರ್ ಕಾರ್ಡ್ ವರಮಹಾಶಯರಿಗೆ ಆಕೆ ಹಾಕಿರುವ ಟೋಪಿ ಬಗ್ಗೆ ಬಯಲು ಮಾಡಿದೆ.

ತಮಿಳುನಾಡಿನ ತಿರುಪುರ್ ಜಿಲ್ಲೆಯ ತಾರಾಪುರಂನ ಯುವಕ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ 35 ವರ್ಷ ವಯಸ್ಸಾಗಿದ್ದರೂ, ಇನ್ನೂ ಮದುವೆಯಾಗಿರಲಿಲ್ಲ. ಆತ ಮದುವೆ ಕನಸು ಹೊತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ 'ಅಂಬಿ ಡೇಟ್ ದಿ ತಮಿಳು ವೇ' ನಲ್ಲಿ ನೋಂದಾಯಿಸಿದ್ದಾನೆ.

ಈ ವೆಬ್ ಸೈಟ್ ನಲ್ಲಿ ಸಂಧ್ಯಾ (30) ಎಂಬ ಯುವತಿಯ ಪರಿಚಯವಾಗಿತ್ತು. ಈರೋಡ್ ಜಿಲ್ಲೆಯ ಕೊಡುಮುಡಿ ಮೂಲದ ಸಂಧ್ಯಾ ಆತನೊಂದಿಗೆ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ. ಇಬ್ಬರೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ದಿನ ಚಾಟ್ ಮಾಡುತ್ತಿದ್ದರು. ಆಕೆಗೆ ಬೇಕಾದಾಗಲೆಲ್ಲ ಯುವಕ ಹಣ ಕಳುಹಿಸುತ್ತಿದ್ದ. ಇವರ ಮದುವೆಗೆ ಹುಡುಗನ ತಂದೆ-ತಾಯಿಯೂ ಒಪ್ಪಿಗೆ ಸೂಚಿಸಿದ್ದರು. ಮೇಲಾಗಿ ವಧುವಿಗೆ ಬೇಕಾದ ಎಲ್ಲಾ ಆಭರಣಗಳು ಮತ್ತು ರೇಷ್ಮೆ ಸೀರೆಗಳನ್ನು ವರನ ಮನೆಯವರು ಖರೀದಿಸಿದರು.ಕಡೆಗೆ ಒಂದು ದಿನ ಪಳನಿ ಬಳಿಯ ದೇವಸ್ಥಾನದಲ್ಲಿ ಸಂಧ್ಯಾ ಮತ್ತು ಯುವಕ ವಿವಾಹವಾದರು.

ವಿವಾಹವಾದ 3 ತಿಂಗಳು ಸಂತೋಷವಾಗಿದ್ದರು. ಆದಾಗ್ಯೂ, ಅವಳ ನಡವಳಿಕೆಯು ಸ್ವಲ್ಪ ಬದಲಾಗಲಾರಂಭಿಸಿತು. ಅದರಲ್ಲೂ ಸಂಧ್ಯಾ ಹೇಳಿದ ವಯಸ್ಸಿಗೆ ಅವಳ ಲಕ್ಷಣಗಳು ತಾಳೆಯಾಗುತ್ತಿಲ್ಲ. ನಂತರ ಆಕೆಯ ಆಧಾರ್ ಕಾರ್ಡ್ ಪರಿಶೀಲಿಸಿದರು.

ಕಾರ್ಡ್‌ನಲ್ಲಿ ಪತಿ ಎಂದು ಚೆನ್ನೈ ಮೂಲದ ಮತ್ತೊಬ್ಬ ವ್ಯಕ್ತಿಯ ಹೆಸರಿತ್ತು. ಇದರಿಂದ ಗಾಬರಿಗೊಂಡ ಯುವಕ ಕೂಡಲೇ ಆಕೆಗೆ ಪ್ರಶ್ನಿಸಿದ್ದಾನೆ. ತಾನು ಸಿಕ್ಕಿಬಿದ್ದಿದ್ದೇನೆಂದು ಅರಿತ ಯುವತಿ ತನ್ನ ಪತಿ ಹಾಗೂ ಆತನ ಕುಟುಂಬಸ್ಥರನ್ನು ಭಯಭೀತಗೊಳಿಸಿದ್ದಾಳೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಕೂಡಲೇ ಯುವಕ ತಾರಾಪುರಂ ಪೊಲೀಸರಿಗೆ ದೂರು ನೀಡಿದ್ದಾನೆ.

ಪೊಲೀಸರು ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು, ವಿಚಾರಣೆ ವೇಳೆ ಯುವತಿಯ ಕುರಿತಾದ ರೋಚಕ ಸಂಗತಿಗಳು ಬಯಲಾಗಿದೆ.

ಹತ್ತು ವರ್ಷದ ಹಿಂದೆ ಈಕೆಗೆ ಒಮ್ಮೆ ಮದುವೆಯಾಗಿರುವುದು ಕಂಡುಬಂದಿದೆ. ಒಂದು ಮಗು ಕೂಡ ಇದೆ. ಮೇಲಾಗಿ ಆತನಿಂದ ಬೇರ್ಪಟ್ಟ ಯುವತಿ, ಉದ್ಯಮಿಗಳು, ಫೈನಾನ್ಷಿಯರ್, ಪೊಲೀಸ್ ಅಧಿಕಾರಿಗಳು ಸೇರಿ 50 ಮಂದಿಯನ್ನು ಮದುವೆಯಾಗಿ ವಂಚಿಸಿರುವುದು ಪತ್ತೆಯಾಗಿದೆ.

ಮದುವೆಯಾಗುವುದು, ಕೆಲವು ತಿಂಗಳ ಪ್ರಣಯದ ನಂತರ ಜಗಳವಾಡಿ ಚಿನ್ನಾಭರಣ, ನಗದು ಜೊತೆ ಮನೆ ಬಿಟ್ಟು ಓಡಿ ಹೋಗುತ್ತಿದ್ದಳು. ಸಂಧ್ಯಾ ಬಲಿಪಶುಗಳಲ್ಲಿ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಇದ್ದಾರೆ ಎನ್ನಲಾಗಿದೆ.

ಸಂಧ್ಯಾ ಡಿಎಸ್‌ಪಿ ಮತ್ತು ಹಲವು ಎಸ್‌ಐಗಳನ್ನು ಮದುವೆಯಾಗಿ ವಂಚಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಿ ಜೈಲಿಗೆ ಕಳೂಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net