

ಡೆಹ್ರಾಡೂನ್: ಉತ್ತರಾಖಂಡದ ಹಲ್ದ್ವಾನಿ ಎಂಬಲ್ಲಿ ಈ ಮಹಿಳೆ ಉದ್ಯಮಿಯೊಬ್ಬರನ್ನು ಹಾವಿನಿಂದ ಕಚ್ಚಿಸಿ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಮಹಿಳೆ ಈ ಹಿಂದೆ ಆ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು ಉದ್ಯಮಿಯನ್ನು ಮುಗಿಸಲು ಪ್ರಯತ್ನಿಸುತ್ತಿದ್ದಳು.
ಜುಲೈ 15ರಂದು ಹಲ್ದ್ವಾನಿಯ ತೀನ್ ಪಾನಿ ಪ್ರದೇಶದ ಬಳಿ ಕಾರಿನಲ್ಲಿ ವ್ಯಕ್ತಿಯೊಬ್ಬನ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಆ ವ್ಯಕ್ತಿಯ ಕಾಲಿನ ಮೇಲೆ ಹಾವು ಕಚ್ಚಿದ ಗುರುತು ಪತ್ತೆಯಾಗಿತ್ತು.
ಮೃತ ದೇಹ ಸ್ಥಳೀಯ ಉದ್ಯಮಿ ಅಂಕಿತ್ ಚೌಹಾಣ್ ಅವರದ್ದಾಗಿತ್ತು. ಅವರ ಕುಟುಂಬವು ಪೊಲೀಸರಿಗೆ ದೂರು ನೀಡಿದ ನಂತರ ಅವರನ್ನು ಗುರುತಿಸಲಾಯಿತು ಮತ್ತು ನಂತರ, ಜುಲೈ 17 ರಂದು ಐಪಿಸಿ ಸೆಕ್ಷನ್ 369/23 ಮತ್ತು 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ, ಅಂಕಿತ್ ಚೌಹಾಣ್ ಅವರ ಕಾಲನ್ನು ಹಾವು ಕಚ್ಚಿದ ಕೊಲೆಯಲ್ಲಿ ಹಾವಾಡಿಗ ಭಾಗಿಯಾಗಿದ್ದಾನೆ ಎಂದು ಪೊಲೀಸರು ಕಂಡುಕೊಂಡರು. ಹಾವಾಡಿಗನನ್ನು ಪೊಲೀಸರು ಬಂಧಿಸಿದ್ದಾರೆ. ನೈನಿತಾಲ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಭಟ್ ಅವರ ಪ್ರಕಾರ, ಈ ಕೊಲೆಯಲ್ಲಿ ಹಾವಾಡಿಗ ಸೇರಿದಂತೆ ಐದು ಜನರು ಭಾಗಿಯಾಗಿದ್ದಾರೆ. ಪ್ರಮುಖ ಆರೋಪಿ ಡಾಲಿ ಅಲಿಯಾಸ್ ಮಾಹಿ ಒಮ್ಮೆ ಅಂಕಿತ್ ಚೌಹಾಣ್ ಜತೆ ಸಂಬಂಧ ಹೊಂದಿದ್ದ.
ಇದನ್ನೂ ಓದಿ: ಹಿರೇಬನ್ನಿಮಟ್ಟಿಯಲ್ಲಿ ಹಾವು ಕಚ್ಚಿ ಮಹಿಳೆ ಸಾವು
ಎಸ್ಎಸ್ಪಿ ಭಟ್ ಅವರ ಪ್ರಕಾರ ಮಾಹಿ, ಅಂಕಿತ್ರನ್ನು ವರ್ಷಗಳಿಂದ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಳು. ಆದರೆ ನಂತರ ಪ್ರಿಯಕರನನ್ನು ತೊಡೆದುಹಾಕಲು ಬಯಸಿದ್ದಳು. ಆದರೂ, ಉದ್ಯಮಿ ಅಂಕಿತ್ ಅವಳನ್ನು ಹಿಂಬಾಲಿಸುತ್ತಲೇ ಇದ್ದನು ಎನ್ನಲಾಗಿದೆ.
ಹಾವು ಕಚ್ಚಿಸುವ ವ್ಯಕ್ತಿಯನ್ನು ನೇಮಿಸಿಕೊಳ್ಳುವ ಮೂಲಕ ಮಾಹಿ, ಅಂಕಿತ್ ಕೊಲೆಗೆ ಯೋಜಿಸಿದ್ದಳು ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಮಾಹಿ ಮತ್ತು ಇತರ ಮೂವರು ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದು ಅಧಿಕಾರಿಗಳು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ತನಿಖೆ ಮೂಲಕ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸೀಸ್)