ವಿಡಿಯೋ ಕಾಲ್​ನಲ್ಲಿ ಮಹಿಳೆ ಮುಂದೆ ಬೆತ್ತಲಾಗಿ ಪೇಚಿಗೆ ಸಿಲುಕಿದ ಬೆಂಗಳೂರಿಗ..!

Man 1
Published on

ಬೆಂಗಳೂರು: ವಿಡಿಯೋ ಕಾಲ್​ ಮಾಡಿದ ಮಹಿಳೆಯ ಬೆಣ್ಣೆಯಂತಹ ಮಾತುಗಳನ್ನು ಕೇಳಿ ಸ್ವಲ್ಪವೂ ಯೋಚಿಸದೇ ಬಟ್ಟೆ ಬಿಚ್ಚಿ ಅವಳೆದುರು ಬೆತ್ತಲಾದ ಬೆಂಗಳೂರು ಮೂಲದ ವ್ಯಕ್ತಿ, ಇದೀಗ ಹಣ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾನೆ.

ಫೆ. 7ರಂದು ವಾಟ್ಸ್ಆ್ಯಪ್​ ವಿಡಿಯೋ ಕಾಲ್ ಮಾಡಿ​, ರೆಕಾರ್ಡ್​ ಮಾಡಿಕೊಂಡ ಮಹಿಳೆ, ವಿಡಿಯೋವನ್ನು ವೈರಲ್​ ಮಾಡುವುದಾಗಿ ಬೆದರಿಸಿ ಸಂತ್ರಸ್ತ ವ್ಯಕ್ತಿಯಿಂದ 20 ಸಾವಿರೂ ರೂ. ಹಣ ಪೀಕಿದ್ದಾಳೆ. ಸಂತ್ರಸ್ತನನ್ನು ಅಂಬಿತ್​ ಕುಮಾರ್​ ಮಿಶ್ರಾ ಎಂದು ಗುರುತಿಸಲಾಗಿದ್ದು, ಶ್ರೇಯಾ ಎಂಬಾಕೆಯ ವಿರುದ್ಧ ವಂಚನೆ ಮತ್ತು ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾರೆ.

ಅಂಬಿತ್​ ಮತ್ತು ಶ್ರೇಯಾ ನಡುವೆ ಮ್ಯಾಟ್ರಿಮೊನಿಯಲ್​ ವೆಬ್​ಸೈಟ್​ ಮೂಲಕ ಪರಿಚಯವಾಗಿದೆ. ತಾನೊರ್ವ ಸಾಫ್ಟ್​ವೇರ್​ ಇಂಜಿನಿಯರ್​, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಅಂಬಿತ್​ ಬಳಿ ಶ್ರೇಯಾ ಪರಿಚಯಿಸಿಕೊಂಡಿದ್ದಾಳೆ. ಬಳಿಕ ಮದುವೆ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾಳೆ.

ಹೀಗೆ ಇಬ್ಬರ ನಡುವಿನ ಪರಿಚಯ ಗಾಢವಾದಂತೆ ತನ್ನ ಕರಾಳ ಮುಖ ಪ್ರದರ್ಶಿಸಿದ ಶ್ರೇಯಾ, ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ ಮಾಡಿದ್ದಾಳೆ. ಬಳಿಕ ತನ್ನ ವೃತ್ತಿ ಜೀವನದ ಬಗ್ಗೆ ಮಾತನಾಡುತ್ತಾ ತನ್ನ ಬಟ್ಟೆಗಳನ್ನು ಬಿಚ್ಚಿದ್ದಾಳೆ. ಬಳಿಕ ಆತನನ್ನು ಬಟ್ಟೆ ಬಿಚ್ಚುವಂತೆ ಹೇಳಿದ್ದಾಳೆ.

ಅವಳು ಹೇಳಿದಂತೆ ನಾನು ಬಟ್ಟೆ ಬಿಚ್ಚುವಾಗ ರೆಕಾರ್ಡ್​ ಮಾಡಿಕೊಂಡಳು. ಬಳಿಕ 1 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಳು. ಕೊಡದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಹೆದರಿಸಿದಳು. ಫೆ. 7ರಂದು ನಾನು 20 ಸಾವಿರ ರೂ. ನೀಡಿದೆ. ಇದೀಗ ಇನ್ನು ಹೆಚ್ಚಿನ ಹಣಕ್ಕೆ ಆಕೆ ಬೇಡಿಕೆ ಇಡುತ್ತಿದ್ದಾಳೆ ಎಂದು ಅಂಬಿತ್​ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net