24 ವರ್ಷದ ಮಹಿಳಾ ಉಪನ್ಯಾಸಕಿಯನ್ನು ಜೀವಂತ ಸುಡಲು ಯತ್ನಿಸಿದ ಪ್ರಿಯತಮ

women
Published on

ವಾರ್ಧಾ: ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ 24 ವರ್ಷದ ಯುವತಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಮಹಾರಾಷ್ಟ್ರದ ವಾರ್ಧಾದ ಬಳಿ ಇರುವ ಹಿಂಗನ್​ಘಾಟ್​ನಲ್ಲಿ ನಡೆದಿದೆ. ಉಪನ್ಯಾಸಕಿಯ ದೇಹ ಶೇ.40 ಸುಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇಂದು (ಫೆ.3) ಬೆಳಗ್ಗೆ ಉಪನ್ಯಾಸಕಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಅವಳ ಮೇಲೆ ಸೀಮೆಎಣ್ಣೆ ಸುರಿಯಲಾಗಿದೆ. ತಕ್ಷಣವೇ ಬೆಂಕಿಯನ್ನು ಹಚ್ಚಿದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸ್ಥಳೀಯರು ಬೆಂಕಿ ನಂದಿಸಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದೇಹದ ಶೇ.40 ಭಾಗ ಸುಟ್ಟಿದ್ದರಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ನಾಗ್​ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯು ಉಪನ್ಯಾಸಕಿಯ ಪ್ರಿಯತಮನೇ ಎಂದು ಹೇಳಲಾಗಿದೆ.

ಉಪನ್ಯಾಸಕಿಯ ಕುತ್ತಿಗೆ, ಎಡಗೈ, ಮುಖ ಸೇರಿದಂತೆ ಅನೇಕ ಭಾಗಗಳು ಸುಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ಕಾಸ್ಟಿಕ್​ ಸರ್ಜನ್​ಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net