ಬಾಲಿವುಡ್​ ನಟ ಶಾರುಖ್ ಖಾನ್​ನನ್ನು ತಬ್ಬಿ ಕೆನ್ನೆಗೆ ಮುತ್ತಿಕ್ಕಿದ ಮಹಿಳಾ ಅಭಿಮಾನಿ

sharukh khan
Published on

ಮುಂಬೈ: ಸಿನಿಮಾ ನಟ-ನಟಿಯರು ಕೆಲವೊಮ್ಮೆ ಅಭಿಮಾನಿಗಳ ಅತಿರೇಕದಿಂದಾಗಿ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗುತ್ತಾರೆ. ಜನರು ತಮ್ಮ ನೆಚ್ಚಿನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಲು, ಹಸ್ತಾಲಾಘವ ಮಾಡುವುದು, ತಬ್ಬಿಕೊಳ್ಳಲು ಯತ್ನಿಸುವುದು, ಆತನಂತೆ ಉಡುಗೆ ತೊಡುವುದು ಹೀಗೆ ವಿವಿಧ ರೀತಿಯಾಗಿ ಅಭಿಮಾನವನ್ನು ತೋರಿಸುತ್ತಾರೆ. ಹೀಗಾಗಿ ತಾರೆಗಳು ಕೂಡಬ ಕೆಲವೊಮ್ಮೆ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ.

ಬಾಲಿವುಡ್​ನ ನಟ ಶಾರುಖ್​ ಖಾನ್ ಕೂಡ​ ಇಂತಹ ಸನ್ನಿವೇಶಕ್ಕೆ ಸಿಲುಕಿದ್ದು, ನಟನಿಗೆ ಸಂಬಂಧಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವೈರಲ್​ ಆಗಿರುವ ವಿಡಿಯೋಗೆ ನೆಟ್ಟಿಗರಿಂದ ಹಲವಾರು ರೀತಿಯ ಪ್ರತಿಕ್ರಿಯೆಗಳು ಬರುತ್ತಿದ್ದು, ಕೆಲವರು ನಟನ ಪರವಾಗಿ ತಮ್ಮ ಅಭಿಪ್ರಾಯ ಮಂಡಿಸಿದರೆ ಇನ್ನು ಕೆಲವರು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಶಾರುಖ್ ಖಾನ್​ ಪಾಲ್ಗೊಂಡಿದ್ದರು. ಶಾರುಖ್ ತನ್ನ ಸಿಬ್ಬಂದಿ ಮತ್ತು ಅಂಗರಕ್ಷಕರೊಂದಿಗೆ ಕೋಣೆಗೆ ಪ್ರವೇಶಿಸುತ್ತಿರುವುದನ್ನು ನೋಡಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಈ ವೇಳೆ ಕೆಲವರು ಆತನಿಗೆ ಹಸ್ತಲಾಘವ ನೀಡಿ ಅಪ್ಪಿಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ ಮಹಿಳಾ ಅಭಿಮಾನಿ ನಟನ ಬಳಿ ಬಂದು ಮುತ್ತಿಕ್ಕಿ, ನಗುತ್ತ ಅಲ್ಲಿಂದ ಮುಂದೆ ಸಾಗಿದ್ದಾಳೆ.

ಆದರೆ ಈ ಕುರಿತು ನೆಟ್ಟಿಗರು ತರಹೇವಾರಿ ಕಾಮೆಂಟ್​ ಮಾಡುತ್ತಿದ್ದು, ಮಹಿಳಾ ಅಭಿಮಾನಿ ಬಲವಂತವಾಗಿ ಶಾರುಖ್ ಖಾನ್​ಗೆ ಮುತ್ತಿಟ್ಟಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಕೆಲವರು ಒಪ್ಪಿಗೆಯಿಲ್ಲದೆ ಮಹಿಳೆಯರು ಚುಂಬಿಸುವುದು ಸರಿಯಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net