

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಸೋನು ಸೂದ್ ಕೊವೀಡ್ ಸಮಯದಲ್ಲಿ ಅಸಹಾಯಕರಿಗೆ ಸಹಾಯ ಮಾಡಿದ್ದರು. ನಟನ ಮಾನವೀಯ ಕೆಲಸಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲವಾಗಿ ಧನ್ಯವಾದ ಹೇಳುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ವಿಭಿನ್ನವಾಗಿ ಧನ್ಯವಾದಗಳನ್ನು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾನೆ.
ಇತ್ತೀಚೆಗಷ್ಟೆ ಮುಂಬೈನ ವ್ಯಕ್ತಿಯೊಬ್ಬ ತನ್ನ ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿ ಚುಚ್ಚಿಕೊಂಡು ಟ್ಯಾಕ್ಸಿಯನ್ನು ಕಟ್ಟಿ ಎಳೆದಿದ್ದಾನೆ. ಕೆಲವೇ ಸಮಯದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈ ಕೃತ್ಯವು ಎಷ್ಟೊಂದು ಅಪಾಯಕಾರಿಯಾಗಿದೆ. ಇಂತಹ ದುಸ್ಸಾಹಸಗಳಿಗೆ ಕೈ ಹಾಕಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ವ್ಯಕ್ತಿಯೊಬ್ಬ ತನ್ನ ಕುತ್ತಿಗೆಗೆ ಸೋನು ಸೂದ್ ಅವರ ಭಾವಚಿತ್ರವನ್ನು ನೇತುಹಾಕಿಕೊಂಡಿದ್ದಾನೆ. ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿ ಚುಚ್ಚಿಕೊಂಡು SUV ಟ್ಯಾಕ್ಸಿಗೆ ಹಗ್ಗ ಕಟ್ಟಿ ತನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸಿಕೊಂಡು ಎಳೆದಿದ್ದಾನೆ.
ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿದ ನಟ ಸೋನು ಸೂದ್, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ದಯವಿಟ್ಟು ಇದನ್ನು ಮಾಡಬೇಡಿ ನನ್ನ ಸಹೋದರ. ಯಾವಾಗಲೂ ಸಂತೋಷವಾಗಿರಿ ಮತ್ತು ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾನೆ.