ಸರ್ಕಾರಿ ಉದ್ಯೋಗ, ಸವಲತ್ತು ಪಡೆಯುವ ದುರಾಸೆಗೆ ಪತಿಯನ್ನೇ ಮುಗಿಸಿದ ಪತ್ನಿ! government job

up government job crime
Published on

ಉತ್ತರಪ್ರದೇಶ :  (government job ) ಸರ್ಕಾರಿ ಉದ್ಯೋಗ, ಸವಲತ್ತುಗಳನ್ನು ಪಡೆಯುವ ದುರಾಸೆಯಲ್ಲಿ ರೈಲ್ವೆ ಇಲಾಖೆಯಲ್ಲಿದ್ದ ಪತಿಯನ್ನೇ ಕೊಲೆ  ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ನಜೀಬಾಬಾದ್‌ನಲ್ಲಿ ಘಟನೆ ನಡೆದಿದ್ದು, ಸರ್ಕಾರಿ ಹುದ್ದೆಯ ಆಸೆಯಲ್ಲಿ ಪತಿಯನ್ನು ಕೊಲೆ ಮಾಡಿದ್ದಾಳೆ. ಆದರೆ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಆಕೆ ಹೇಳಿದ್ದಳು,

ದೀಪಕ್ ಮೃತ. ಶಿವಾನಿ  ಪತಿಯನ್ನು ಕೊಲೆ ಮಾಡಿದ ಆರೋಪಿ. ನಜೀಬಾಬಾದ್‌ನ ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಆದರ್ಶ ನಗರದ ಬಾಡಿಗೆ ಮನೆಯಲ್ಲಿ ಪತ್ನಿ ಶಿವಾನಿ ಜೊತೆ ವಾಸಿಸುತ್ತಿದ್ದರು.  ಈ ಜೋಡಿ ಪ್ರೇಮ ವಿವಾಹವಾಗಿದ್ದರು. ಕಳೆದ ಶುಕ್ರವಾರ ದೀಪಕ್ ಹೃದಯಾಘಾತವಾಗಿದೆ ಎಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಬಿಜ್ನೋರ್‌ನ ಜಿಲ್ಲಾ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟರು.

ದೀಪಕ್ ಅವರ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದಾಗ ಅನುಮಾನಗಳು ಹುಟ್ಟಿಕೊಂಡಿತ್ತು.ಕತ್ತು ಹಿಸುಕಿ ಸಾವನ್ನಪ್ಪಿರುವುದನ್ನು ದೃಢಪಟ್ಟಿತ್ತು. ದೀಪಕ್ ಅವರ ಸಹೋದರ ಪಿಯೂಷ್ ಅಲಿಯಾಸ್ ಮುಕುಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಶಿವಾನಿ ಮತ್ತು ಅಪರಿಚಿತ ಸಹಚರನ ವಿರುದ್ಧ ಪ್ರಕರಣ ದಾಖಲಿಸಿದರು. ಶಿವಾನಿಯನ್ನು ವಶಕ್ಕೆ ಪಡೆಯಲಾಗಿದೆ.

ಶಿವಾನಿ ಅಪರಾಧವನ್ನು ಒಪ್ಪಿಕೊಂಡಳು.  ಅವನನ್ನು ಕತ್ತು ಹಿಸುಕಲು ಹಗ್ಗವನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ದೀಪಕ್ ಅವರ ಹಿನ್ನೆಲೆ ಮಣಿಪುರದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸಿದ್ದು, 2023 ರಲ್ಲಿ ಅವರು ಆ ಹುದ್ದೆಯನ್ನು ತೊರೆದು ರೈಲ್ವೆಗೆ ಸೇರಿದರು. ಮೃತರ ಅವಲಂಬಿತ ಯೋಜನೆಯಡಿ ಉದ್ಯೋಗ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಶಿವಾನಿ ಈ ಕೊಲೆ ಮಾಡಿರಬಹುದು ಎಂಬ ಆರೋಪಗಳು ಕೇಳಿಬಂದಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net