ಪ್ರಿಯಕರನ ಜೊತೆ ಸೇರಿ ಟವಲ್​ನಿಂದ ಕತ್ತು ಹಿಸುಕಿ ಪತಿಯನ್ನು ಕೊಂದ ಮಹಿಳೆ| Murder

Murder 3
Published on

Murder: ಮೊದಲೆಲ್ಲ ಅಕ್ರಮ ಸಂಬಂಧ ಹಿನ್ನೆಲೆ ಹೆಂಡತಿಯನ್ನು ಕೊಲೆಗೈದ ಸುದ್ದಿಗಳು ಜಾಸ್ತಿ ನಡೆಯುತ್ತಿದ್ದವು. ಈಗ ಟ್ರೆಂಡ್ ಬದಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಗಂಡಂದಿರನ್ನು ಹೆಂಡತಿಯರು ಕೊಲೆ ಮಾಡುತ್ತಿದ್ದಾರೆ. ಕೌಟುಂಬಿಕ ಕಲಹ, ಅಕ್ರಮ ಸಂಬಂಧ, ಆರ್ಥಿಕ ಸಮಸ್ಯೆ ಕುಟುಂಬಗಳನ್ನು ಒಡೆಯುತ್ತಿವೆ.

ಇಂತಹದ್ದೇ ಮತ್ತೊಂದು ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಸೋನ ಮಂಡಲದ ವೆಲ್ಮಲ ಗ್ರಾಮದಲ್ಲಿ ಹೆಂಡತಿಯೊಬ್ಬಳು ಕಟ್ಟಿಕೊಂಡ ತನ್ನ ಗಂಡನನ್ನೇ ಆತನ ಟವಲ್​ನಿಂದಲೇ ಕುತ್ತಿಗೆಗೆ ಸುತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಪತ್ನಿ ನಾಗಲಕ್ಷ್ಮಿ, ಪತಿ ಹರಿಚರಣ್​ನನ್ನು ಕೊಲೆ ಮಾಡಿದ್ದಾಳೆ.  ಅದೇ ಗ್ರಾಮದ ಮಹೇಶ್ ಎನ್ನುವವನ ಜೊತೆ ನಾಗಲಕ್ಷ್ಮಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಈ ವಿಷಯ ಪತಿಗೆ ತಿಳಿದಾಗ 5 ದಿನಗಳ ಹಿಂದೆ ಆತನನ್ನು ಟವೆಲ್ ನಿಂದ ಕತ್ತು ಹಿಸುಕಿ ಕೊಂದಿದ್ದಾಳೆ ಎನ್ನಲಾಗಿದೆ.

ನಂತರ ಹರಿಚರಣ್ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾನೆ ಎಂದು ಸಂಬಂಧಿಕರು ಮತ್ತು ಗ್ರಾಮಸ್ಥರನ್ನು ನಂಬಿಸಿದ್ದಾಳೆ. ತಾಯಿಯ ಮೇಲೆ ಅನುಮಾನಗೊಂಡ ಆಕೆಯ ಮಗ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರು ಸತ್ಯವನ್ನು ತಿಳಿದುಕೊಂಡು ನಾಗಲಕ್ಷ್ಮಿ ಮತ್ತು ಆಕೆಯ ಗೆಳೆಯ ಮಹೇಶ್ ಅವರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net