

ಮುಂಬೈ: ಆರ್ಥಿಕ ಸಂಕಷ್ಟದಿಂದಾಗಿ(Financial) 43 ವರ್ಷದ ಮಹಿಳೆಯೊಬ್ಬರು ತನ್ನ ಆರು ತಿಂಗಳ ಮಗನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಗುರುವಾರ ಸಂಜೆ ಗೋವಂಡಿಯ ಗಾರ್ಮೆಂಟ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮಹಿಳೆ ತನ್ನ ಸಹೋದ್ಯೋಗಿಯೊಂದಿಗೆ ಜಗಳವಾಡಿಕೊಂಡು, ಸಹೋದ್ಯೋಗಿಯ ಮೇಲೆ ಹಲ್ಲೆ ಮಾಡಲು ಚಾಕು ಹೊರತೆಗೆದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಜಗಳದ ಬಗ್ಗೆ ಮಾಹಿತಿ ಪಡೆದ ಪೊಲೀಸರ ತಂಡ ಅಲ್ಲಿಗೆ ಧಾವಿಸಿತು. ವಿಚಾರಣೆ ನಡೆಸಿದಾಗ, ಮಹಿಳೆ ತನ್ನ ಆರು ತಿಂಗಳ ಮಗನನ್ನು ತನ್ನ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. ಅವನನ್ನು ಬೆಳೆಸಲು ಸಾಧ್ಯವಾಗದ ಕಾರಣ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಅಲ್ಲದೆ, ತನಗೆ ಮತ್ತು ತನ್ನ ಮಗನಿಗೆ ಎಚ್ಐವಿ ಪಾಸಿಟಿವ್ ಬಂದಿದೆ ಎಂದು ಮಹಿಳೆ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.(ಏಜೆನ್ಸೀಸ್)