ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದ ಯುವತಿ; ಇಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು!

Lady
Published on

ನವದೆಹಲಿ: ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ 18 ವರ್ಷದ ಯುವತಿಯೊಬ್ಬಳು ಮೂರನೇ ಮಹಡಿಯಿಂದ ಜಿಗಿದ ಭಯಾನಕ ಪ್ರಕರಣವೊಂದು ವರದಿಯಾಗಿದೆ. ಹೀಗೆ ಸುಮಾರು 30 ಅಡಿ ಎತ್ತರದಿಂದ ಜಿಗಿದ ಯುವತಿಯ ಕಾಲುಗಳಿಗೆ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಸಾಗಿಸಲಾಗಿದೆ.

37 ಹಾಗೂ 26 ವರ್ಷದ ಇಬ್ಬರು ಯುವಕರಿಂದ ಅತ್ಯಾಚಾರಕ್ಕೆ ಒಳಗಾದ ಈ ಯುವತಿ ಕೊನೆಗೆ ಅವರಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಗೆ ತೆರಳಿ ಅಲ್ಲಿನ ಕಿಟಕಿಯೊಂದರಿಂದ ಹೊರಕ್ಕೆ ಜಿಗಿದು ತಪ್ಪಿಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಜಿಗಿಯದಂತೆ ಆಕೆಗೆ ಕೂಗಿ ಹೇಳಿದರೂ ಅತ್ಯಾಚಾರಿಗಳಿಂದ ತೀವ್ರ ಆತಂಕಕ್ಕೆ ಒಳಗಾಗಿ ಕೆಳಕ್ಕೆ ಹಾರಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ಕಾಲುಗಳಿಗೆ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ರಷ್ಯಾದ ಅಲ್ಟಾಯ್ ಪ್ರದೇಶದ ಬರ್ನೌಲ್​ ಎಂಬಲ್ಲಿ ಈ ಪ್ರಕರಣ ನಡೆದಿದೆ. ಅಂದಹಾಗೆ ಈ ಪ್ರಕರಣದ ಹಿಂದೆ ಇನ್ನೊಬ್ಬಳು ಯುವತಿ ಇರುವುದು ರಷ್ಯಾದ ತನಿಖಾ ಸಮಿತಿಯಿಂದ ತಿಳಿದು ಬಂದಿದೆ. 19 ವರ್ಷದ ಯುವತಿಯೊಬ್ಬಳು ಸೇಡು ತೀರಿಸಿಕೊಳ್ಳುವ ಸಲುವಾಗಿ ಸಂತ್ರಸ್ತೆಯನ್ನು ಅಪಾರ್ಟ್​ಮೆಂಟ್​ವೊಂದಕ್ಕೆ ಕರೆಸಿಕೊಂಡಿದ್ದಳು. ಆಕೆ ಅಲ್ಲಿಗೆ ಬರುತ್ತಿದ್ದಂತೆ ಈ ಯುವತಿ ಕರೆಸಿಕೊಂಡಿದ್ದ ಆ ಇಬ್ಬರು ಪುರುಷರು ಅತ್ಯಾಚಾರ ನಡೆಸಿದ್ದಾರೆ. ಅವರ ಲೈಂಗಿಕ ಕಿರುಕುಳ ತಾಳಲಾರದೆ ಸಂತ್ರಸ್ತೆ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ. ಸೇಡಿಗೆ ಕಾರಣ ಇತ್ಯಾದಿ ಮಾಹಿತಿ ಪೊಲೀಸರಿಂದ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net