ಸೆಕ್ಸ್​ ಮಾಡದಿದ್ದರೂ ತಾಯಿಯಾದೆ! ವಿಚಿತ್ರ ಸನ್ನಿವೇಶದ ನೆನಪನ್ನು ಬಿಚ್ಚಿಟ್ಟ ಮಹಿಳೆ

women
Published on

ಲಂಡನ್​: ಗಂಡು ಹೆಣ್ಣು ದೈಹಿಕ ಸಂಪರ್ಕ ಮಾಡಿದ ನಂತರ ಹೆಣ್ಣಿನಲ್ಲಿ ಭ್ರೂಣ ನಿಲ್ಲುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಒಂದು ಪ್ರಕರಣದಲ್ಲಿ ಆಗಿದ್ದೇ ಬೇರೆ ಕಥೆ. ಬಾಯ್​ಫ್ರೆಂಡ್​ ಜತೆ ಸೆಕ್ಸ್​ ಮಾಡದಿದ್ದರೂ ಆ ಯುವತಿ ಗರ್ಭವತಿ ಆಗಿದ್ದಳು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ..

ಹೌದು! ಇಂತದ್ದೊಂದು ಆಶ್ಚರ್ಯಕರ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ನಿಕೋಲ್ ಮೂರ್​ಗೆ ಇದೀಗ 28 ವರ್ಷ. ಆಕೆ 20 ವರ್ಷದವಳಿದ್ದಾಗ ಗರ್ಭವತಿಯಾದಳಂತೆ. ಅದಾಗಲೇ ಬಾಯ್​ಫ್ರೆಂಡ್​ ಜತೆ ಇದ್ದ ಆಕೆಗೆ ಒಂದು ವಿಚಿತ್ರ ಕಾಯಿಲೆ ಇತ್ತಂತೆ. ಆಕೆಯ ಗುಪ್ತಾಂಗದಲ್ಲಿ ಸಮಸ್ಯೆಯಿದ್ದು, ಮುಟ್ಟಾದ ಸಮಯದಲ್ಲಿ ಟ್ಯಾಂಪಾನ್​ ಹಾಕಿಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲವಂತೆ. ಆ ಕಾರಣದಿಂದಾಗಿ ಆಕೆಯ ಬಾಯ್​ಫ್ರೆಂಡ್​ ಮತ್ತು ಅವಳು ಮಾತನಾಡಿ ಒಂದು ನಿರ್ಧಾರಕ್ಕೆ ಬಂದಿದ್ದರು. ಇಬ್ಬರ ಮಧ್ಯೆ ಸೆಕ್ಸ್ ಇಲ್ಲಿದಿದ್ದರೂ ಇಬ್ಬರು ಅನ್ಯೋನ್ಯವಾಗಿ ಇರಲು ತೀರ್ಮಾನಿಸಿದ್ದರು.

ಆದರೆ ಆ ಒಂದು ದಿನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕೆಗೆ ಹೊಟ್ಟೆ ಮತ್ತು ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಆಗ ಆಕೆಗೆ ಹತ್ತಿರದ ಸ್ನೇಹಿತೆಯಾಗಿದ್ದ, ಆಕೆಯ ಬಾಸ್​ ಅವಳಿಗೆ ನೀನು ಗರ್ಭವತಿ ಇರಬಹುದು ಎಂದು ಹೇಳಿದ್ದಾರೆ. ಅದನ್ನು ಕೇಳಿ ನಿಕೋಲ್​ ನಗಲಾರಂಭಿಸಿದ್ದಾಳೆ. ನಾನಿನ್ನೂ ವರ್ಜಿನ್​ ಹಾಗಿದ್ದ ಮೇಲೆ ಗರ್ಭವತಿ ಆಗಲು ಹೇಗೆ ಸಾಧ್ಯ ಎಂದು ಕೇಳಿದ್ದಾಳೆ. ಆದರೂ ಆಕೆಯ ಒತ್ತಾಯದ ಮೇರೆಗೆ ಗರ್ಭಧಾರಣೆ ಪರೀಕ್ಷೆ ಮಾಡಿಸಿದ್ದಾಳೆ. ಆಗ ಆಕೆ ಗರ್ಭವತಿ ಆಗಿರುವ ವಿಚಾರ ಹೊರಬಿದ್ದಿದೆ.

ಈ ವಿಚಾರವಾಗಿ ವೈದ್ಯರನ್ನು ಸಂಪರ್ಕಿಸಲಾಗಿದೆ. ಆಗ ವೈದ್ಯರು ಈ ರೀತಿ ಆಗುವುದಕ್ಕೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಹೆಣ್ಣಿನ ಗುಪ್ತಾಂಗದ ಬಳಿ ಗಂಡಿನ ದ್ರವ ಇದ್ದರೆ ಅದರಿಂದ ಹೆಣ್ಣು ಗರ್ಭವತಿ ಆಗಬಹುದು ಎಂದು ಹೇಳಿದ್ದಾರೆ. ಅದಾದ ನಂತರ ಆಕೆಯ ಸಮಸ್ಯೆಗೂ ಚಿಕಿತ್ಸೆ ಕೊಡಿಸಲಾಗಿದೆ. ಒಂಬತ್ತು ತಿಂಗಳ ನಂತರ ನಿಕೋಲ್ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾಳೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net