ಯುವತಿಯ ಬ್ಯಾಕ್​ ಮೇಲೆ ಸ್ಕೇಲ್​ನಲ್ಲಿ ಹೊಡೆದಿದ್ದಕ್ಕೆ 90 ಲಕ್ಷ ರೂ. ಕಳೆದುಕೊಂಡ ಬಾಸ್!

Woman
Published on

ನವದೆಹಲಿ: ಯಾರ್ಯಾರೋ ಯಾವ್ಯಾವುದೋ ತಪ್ಪಿಗೆ ದಂಡ ತೆರಬೇಕಾಗುತ್ತದೆ. ಆದರೆ ಇಲ್ಲೊಬ್ಬ ಮಾಡಿದ ತಪ್ಪಿಗೆ ಬರೋಬ್ಬರಿ 90 ಲಕ್ಷ ರೂ. ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಆತ ಮಾಡಿದ್ದೇನೆಂದರೆ ಯುವತಿಯೊಬ್ಬಳ ನಿತಂಬದ ಮೇಲೆ ಸ್ಕೇಲ್​ನಿಂದ ಹೊಡೆದಿದ್ದು.

ಐರ್ಲೆಂಡ್​ನ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಮಹಿಳಾ ಉದ್ಯೋಗಿಯೊಬ್ಬಳು ತನ್ನ ಬಾಸ್ ವಿರುದ್ಧವೇ ಆರೋಪ ಹೊರಿಸಿ, ದಂಡ ತೆರುವಂತೆ ಮಾಡಿದ್ದಾಳೆ. ಕಚೇರಿಯಲ್ಲಿ ಬಾಸ್​ ನನ್ನ ನಿತಂಬದ ಮೇಲೆ ಸ್ಕೇಲ್​ನಿಂದ ಹೊಡೆದಿದ್ದು, ಅದರಿಂದ ನನಗೆ ತೀವ್ರ ಮುಜುಗರವಾಗಿದೆ. ಮಾತ್ರವಲ್ಲ, ಲೈಂಗಿಕವಾಗಿ ಕಿರುಕುಳಕ್ಕೆ ಒಳಗಾದಂತಾಗಿದೆ ಎಂದು ಆಕೆ ಆರೋಪಿಸಿದ್ದಳು.

ಈ ಬಗ್ಗೆ ಮೇಲಿನವರಿಗೆ ತಿಳಿಸಿದರೆ, ತನ್ನ ಉಡುಗೆ-ವರ್ತನೆಯೇ ಪ್ರಚೋದಕ ಎಂಬ ಆರೋಪ ಹೊರಿಸಲಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ನಂತರ ಈಕೆ ಈ ವಿಷಯವನ್ನು ನಾರ್ಥರ್ನ್ ಐರ್ಲೆಂಡ್ ಇಕ್ವ್ಯಾಲಿಟಿ ಕಮಿಷನ್ ಮುಂದೆ ಕೊಂಡೊಯ್ದಿದ್ದು, ಅಲ್ಲಿ ಆಕೆಗೆ ಪರಿಹಾರವಾಗಿ 90 ಲಕ್ಷ ರೂ. ನೀಡುವಂತೆ ಬಾಸ್​ಗೆ ಕಮಿಷನ್ ಸೂಚಿಸಿದ್ದನ್ನು ಅಲ್ಲಿನ ಮಾಧ್ಯಮ ವರದಿ ಮಾಡಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net