ಡೇಟಿಂಗ್ ಮಾಡೋಣ ಎಂದು ಕರೆದು ಕಿಡ್ನ್ಯಾಪ್ ಮಾಡಿದ ಭೂಪ; ಆ ಮಹಿಳೆ ಅನುಭವಿಸಿದ್ದು ಮಾತ್ರ ನರಕಯಾತನೆ…

bumble
Published on

ಟೆಕ್ಸಾಸ್: ಬಂಬಲ್ ಎಂಬ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಈ ಮಹಿಳೆಯನ್ನು ಐದು ದಿನಗಳ ಕಾಲ ಒತ್ತೆಯಾಳಾಗಿರಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಕ್ರಿಸ್ಮಸ್ ನ ಹಿಂದಿನ ದಿನದಂದು ಆ ವ್ಯಕ್ತಿ ಮಹಿಳೆಯನ್ನು ಟೆಕ್ಸಾಸ್ ನ ಸ್ಪ್ರಿಂಗ್ ನಲ್ಲಿರುವ ತನ್ನ ಅಪಾರ್ಟ್ಮೆಂಟ್ಗೆ ಕರೆದೊಯ್ದನು. ಅವರು ಅವನ ಸ್ಥಳವನ್ನು ತಲುಪಿದಾಗ, ಪುರುಷನು ಲೈಂಗಿಕ ತೃಷೆ ತೀರಿಸಲು ಮುಂದಾಗಿದ್ದಾನೆ. ಆದರೆ ಈ ಮಹಿಳೆ ಅದನ್ನು ನಿರಾಕರಿಸಿದ್ದಾಳೆ.

ಹೀಗಾಗಿ ಆ ಪುರುಷನೂ ಈಕೆಯನ್ನು ವಾಪಸ್ ಮನೆಗೆ ತೆರಳಲು ಬಿಟ್ಟಿಲ್ಲ. ಲೈಂಗಿಕ ಸುಖ ನಿರಾಕಸಿದ್ದಕ್ಕೆ, ಪುರುಷನು ಅವಳನ್ನು ಬಿಡಲು ನಿರಾಕರಿಸಿದನು ಎಂದು ಮಹಿಳೆ ಹೇಳಿದ್ದಾಳೆ. ಡಿ.24 ರಿಂದ ಡಿ.29 ರವರೆಗೆ ಆ ಮಹಿಳೆಯನ್ನು ಒತ್ತೆಯಾಳು ಆಗಿ ಇರಿಸಲಾಗಿತ್ತು. ಬಂಧನದ ಸಮಯದಲ್ಲಿ, ಆಕೆಗೆ ನೀರು ಅಥವಾ ಆಹಾರವನ್ನು ನೀಡಲಿಲ್ಲ ಎಂದು ದೂರಿನಲ್ಲಿ ದಾಖಲಾಗಿದೆ.

ಬಂಧನದ ಸಮಯದಲ್ಲಿ ಆ ವ್ಯಕ್ತಿ ಮಹಿಳೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ.

ಡಿ.29 ರಂದು ಆ ವ್ಯಕ್ತಿ ತನ್ನ ತಂದೆಯ ಮನೆಗೆ ತೆರಳಿದ್ದಾಗ ಮಹಿಳೆ ಅಪಾರ್ಟ್ಮೆಂಟಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಹೊರಗಡಡೆ ಬಂದ ಆಕೆ ನೆರೆಹೊರೆಯ ಅಪರಿಚಿತ ವ್ಯಕ್ತಿಯೊಬ್ಬರಿಂದ ಸಹಾಯವನ್ನು ಪಡೆದು ವಾಪಸ್ ತನ್ನ ಮನೆ ಸೇರಿದ್ದಳು. ಇದಾದ ಮೇಲೆ ಆಕೆ ಪೊಲೀಸರಲ್ಲಿಗೆ ತೆರಳಿ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net