ಹಣೆಯ ಮೇಲೆ ಪ್ರಿಯಕರನ ಹೆಸರಿನ ಹಚ್ಚೆ ಹಾಕಿಸಿಕೊಂಡ ಯುವತಿ; ಇದೆಂಥಾ ಮೂರ್ಖತನ ಎಂದ ನೆಟ್ಟಿಗರು

viral video
Published on

ನವದೆಹಲಿ: ಕೈಮೇಲೆ, ಎದೆಮೇಲೆ, ಕುತ್ತಿಗೆಯ ಮೇಲೆ, ಹೊಟ್ಟೆಮೇಲೆ, ಬೆನ್ನಮೇಲೆ ಹೀಗೆ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ತನ್ನ ಪ್ರಿಯಕರನನ್ನು ಮೆಚ್ಚಿಸಲು ಹಣೆಯ ಮೇಲೆ ಟ್ಯಾಟು ಹಾಕಿಸಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.

ಎನಾ ಸ್ಟ್ಯಾನ್ಸ್‌ಕೊವ್ಸ್ಕಿ ತನ್ನ ಪ್ರಿಯಕರ ಕೆವಿನ್​ ಹೆಸರನ್ನು ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡ ಯುವತಿ. ಈಕೆ ಇನ್‌ಸ್ಟಾಗ್ರಾಮ್​ನ ಕಂಟೆಂಟ್ ಕ್ರಿಯೇಟರ್​ ಆಗಿದ್ದಾಳೆ. ತನ್ನ ಹಣೆಯ ಮೇಲೆ 'ಕೆವಿನ್' ಎಂದು ಶಾಯಿಯಿಂದ ಬರೆಸಿಕೊಂಡಿದ್ದಾಳೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಯುವತಿಯ  ಹಣೆಯ ಮೇಲೆ ಕೆವಿನ್​ ಹೆಸರನ್ನು ಹಚ್ಚೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.  ಹಚ್ಚೆ ಹಾಕಿದ ನಂತರ ಯುವತಿ ಕುಣಿದು ಕುಪ್ಪಳಿಸಿರುವುದು ವಿಡಿಯೋದಲ್ಲಿ ಸರೆಯಾಗಿದೆ.

ಅತ್ಯಂತ ಮೂರ್ಖತನಕ ವಿಡಿಯೋ... ಇದು ನಿಜವಾದ ಇಂಕ್​? ಪ್ರಿಯಕರನನ್ನು ಮೆಚ್ಚಿಸಲು ತಮಾಷೆ ಮಾಡುತ್ತಿದ್ದಾಳೆ. ಇದು ನಕಲಿ ಶಾಯಿ ಅಲ್ಲ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಟೀಕೆಗೆ ಪ್ರತಿಕ್ರಿಯಿಸಿರುವ ಸ್ಟಾನ್ಸ್ಕೊವ್ಸ್ಕಿ ಹಚ್ಚೆ ಹಿಂದಿನ ಕಾರಣವನ್ನು ವಿವರಿಸುವ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತನ್ನ ಸಂಗಾತಿಯನ್ನು ಪ್ರೀತಿಸುತ್ತೇನೆ. ಹಚ್ಚೆ ಅವನ ಮೇಲಿನ ಪ್ರೀತಿಯನ್ನು ತೋರಿಸುವ ಒಂದು ಮಾರ್ಗವಾಗಿದೆ. ಇದು ನಿಜವಾದ ಟ್ಯಾಟೂ ಎಂದು ಹೇಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net