ವರದಕ್ಷಿಣೆ ಕಿರುಕುಳಕ್ಕೆ 25 ವರ್ಷದ ಮಹಿಳೆ ಬಲಿ! Dowry harassment

Death Case
Published on

ಲಕ್ನೋ: ವರದಕ್ಷಿಣೆಗಾಗಿ ಅತ್ತೆ ಮತ್ತು ಮಾವನಿಂದ ನಿರಂತರ ಕಿರುಕುಳಕ್ಕೆ ತುತ್ತಾಗಿ ಮಹಿಳೆಯೊಬ್ಬಳು ( Dowry harassment ) ನಿಗೂಢವಾಗಿ ಮೃತಪಟ್ಟಿದ್ದು, ಈ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಘಟನೆ ಏನು?

ಮೃತಳನ್ನು ನಿಖಿತಾ ಎಂದು ಗುರುತಿಸಲಾಗಿದೆ. ಗಂಡ ಹಾಗು ಅತ್ತೆ ಮಾವನ ವರದಕ್ಷಿಣೆ ಕಿರುಕುಳದಿಂದ ಮೃತಪಟ್ಟಿದ್ದಾಳೆ ಎಂದು ವರದಿ ಬಂದಿದೆ. ಉದ್ಯಮಿ ಪಾರ್ಥ್ ಮಹಾನಾ ಡಿಸೆಂಬರ್ 2022 ರಲ್ಲಿ ದೆಹಲಿ ಮೂಲದ ಯುವತಿಯನ್ನು ವಿವಾಹವಾದರು. ದಂಪತಿಯು ಲಕ್ನೋದಲ್ಲಿರುವ ಮನೆಯಲ್ಲಿ ವಾಸವಿದ್ದು, ಮಹಿಳೆಯು ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಆರೋಪ ಏನು?

ಮೃತಳ ಕುಟುಂಬಸ್ಥರ ಪ್ರಕಾರ, ಮಗಳನ್ನು ಮದುವೆ ಮಾಡಿ ಕಳುಹಿಸಿದ ನಂತರ 15 ಲಕ್ಷ ವರದಕ್ಷಿಣೆ ನೀಡುವಂತೆ ಆಕೆಯ ಗಂಡ ಹಾಗೂ ಅತ್ತೆ ಮಾವ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಹಾಗೆಯೇ, ಕೊಲೆ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಆ ದಿನ ಪಾರ್ಥ್ ಹಾಗೂ ನಿಕಿತಾ ಪಾರ್ಟಿವೊಂದರಲ್ಲಿ ಭಾಗಿಯಾಗಿದ್ದರು. ಆ ರಾತ್ರಿ ಪಾರ್ಥ್ ಪತ್ನಿಯ ಸಹೋದರಿ ​ ಮುಸ್ಕಾನ್​ಗೆ ಕರೆಮಾಡಿ ದಂಪತಿ ಜಗಳ ಮಾಡಿಕೊಮಡಿರುವ ಘಟನೆಯನ್ನು ವಿವರಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸಹೋದರಿ ತಕ್ಷಣವೇ ವಿಡಿಯೋ ಕಾಲ್​ ಮಾಡಲು ತಿಳಿಸಿದ್ದು, ಈ ವೇಳೆ ನಿಖಿತಾ ನೆಲದ ಮೇಲೆ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಗಮನಿಸಿದ್ದಾಳೆ.

ಈ ವೇಳೆ ಮುಸ್ಕಾನ್​ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಬೆಡಿಕೊಂಡರೂ, ಪಾರ್ಥ್ ನನ್ನ ದಾರಿಯನ್ನು ತಪ್ಪಿಸಿದನು. ಮರುದಿನ ಬೆಳಿಗ್ಗೆ ಸಂಬಂಧಿಕರಿಗೊಂದಿಗೆ ವಿಚಾರಿಸಿದ ನಂತರ, ಸಹೋದರಿಯ ಸಾವಿನ ಸುದ್ದಿ ತಿಳಿದಿದೆ ಎಂದು ಮುಸ್ಕಾನ್​ ತಿಳಿಸಿದ್ದಾಳೆ.

ನಿಕಿತಾಳನ್ನು ತನ್ನ ಅತ್ತೆ-ಮಾವನೇ ಕೊಂದಿದ್ದಾಳೆ ಎಂದು ಸುನೀತಾ ಆರೋಪಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಸತೀಶ್ ಮಹಾನಾ ಪಾರ್ಥ್​ ಕುಟುಂಬವನ್ನು ರಕ್ಷಿಸುತ್ತಿದ್ದಾರೆ ಆದ್ದರಿಂದ ಈ ವಿಷಯದಲ್ಲಿ ಯಾವುದೇ ಪೊಲೀಸ್ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಕುಟುಂಬದ ದೂರಿನ ಆಧಾರದ ಮೇಲೆ ಪತಿ, ಹಾಗೂ ಅತ್ತೆ ಮಾವನ ವಿರುದ್ಧ ವರದಕ್ಷಿಣೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net