

ನವದೆಹಲಿ: ಕೆಲವೊಮ್ಮೆ ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ. ನಾವು ಅಂತಹ ಸಾಹಸಕ್ಕೆ ಕೈ ಹಾಕದಿರುವುದು ಒಳ್ಳೆಯದು. ಇಲ್ಲೊಬ್ಬಳು ಮಹಿಳೆ ನದಿಯ ಮೇಲಿನ ಮರದ ದಿಮ್ಮಿಯ ಮೇಲೆ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.
ಚಿಸಾ ಮೇರಿ ಎಂಬಾಕೆ ನದಿಯ ಮೇಲಿನ ಮರದ ದಿಮ್ಮಿಯ ಮೇಲೆ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ. 2017ರಲ್ಲಿ ನಡೆದ ಘಟನೆ ಈಗ ಮತ್ತೆ ವೈರಲ್ ಆಗಿದೆ. ಆದ್ರೆ ನೀವು ಯಾವತ್ತೂ ಈ ರೀತಿ ಸಾಹಸಕ್ಕೆ ಹೋಗದಿರಿ.
ವಿಡಿಯೋದಲ್ಲಿ ಏನಿದೆ?: ಸುಂದರವಾದ ಪರಿಸರದಲ್ಲಿ ಹರಿಯುತ್ತಿರುವ ನದಿ. ನದಿಯ ಮೇಲೆ ಸೇತುವೆಯ ರೀತಿಯಲ್ಲಿ ಮರದ ದಿಂಬಿಯನ್ನು ಕಾಣಬಹುದು. ಈ ದಿಂಬಿಯ ಮೇಲೆ ಮಹಿಳೆಯೊಬ್ಬಳು ಯೋಗ ಭಂಗಿಯಲ್ಲಿ ಮಾಡಲು ಪ್ರಯತ್ನಿಸಿದ್ದಾಳೆ. ಯೋಗ ಭಂಗಿ ಪ್ರಯತ್ನಿಸಿದ ಆಕೆ ಕಾಲು ಜಾರಿ ಹರಿಯುವ ನದಿಗೆ ಬಿದ್ದಿದ್ದಾಳೆ. ಈ ವಿಡಿಯೋ 4 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು . ಆದರೆ ಇತ್ತೀಚೆಗೆ ಟ್ವಿಟರ್ನಲ್ಲಿ ಮತ್ತೆ ಪೋಸ್ಟ್ ಮಾಡಲಾಗಿದೆ. ಇಂತಹ ಕೆಟ್ಟ ಸಾಹಸಕ್ಕೆ ಕೈ ಹಾಕಿ ಪ್ರಾಣಕ್ಕೆ ಅಪಾಯ ತಂದುಕೊಳ್ಳದಿರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಜಾಗೃತಿಗಾಗಿ ಈ ವಿಡಿಯೋ ಶೇರ್ ಮಾಡುತ್ತಿದ್ದಾರೆ.