VIDEO | ತಂದೆಯ ಮುಂದೆಯೇ ಕಿಡ್ನಾಪ್ ನಾಟಕವಾಡಿ ಪ್ರೀತಿಸಿದವನೊಂದಿಗೆ ಮದುವೆಯಾದ 18ರ ಯುವತಿ!

#Kidnap #RajannaSircilla #POCSOAct #Woman #Telangana #ViralVideo #Marriage
Published on

ತೆಲಂಗಾಣ: ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗಲು ಹುಡುಗಿಯೊಬ್ಬಳು ಖತರ್ನಾಕ್ ಐಡಿಯಾ ಮಾಡಿದ್ದಾಳೆ. ತನ್ನ ತಂದೆಯೇ ಎದುರಲ್ಲೇ ಕಿಡ್ನಾಪ್ ನಾಟಕವಾಡಿದ್ದಾಳೆ. ಕೊನೆಗೆ ತನ್ನ ಇಚ್ಛೆಯಂತೆಯೇ ಮದುವೆಯಾಗಿದ್ದಾಳೆ. ಇದೀಗ ಮದುವೆಯಾಗಿರುವ ಯುವತಿ ಶಾಲಿನಿ ವಿಡಿಯೋವೊಂದನ್ನು ಮಾಡಿ, ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ಪ್ರೀತಿಸಿದವನನ್ನು ಮದುವೆಯಾಗಲು ಈ ರೀತಿ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ತೆಲಂಗಾಣದ ರಾಜಣ್ಣ ಸಿರ್ಸಿ ಎಂಬಲ್ಲಿ ಹಾಡಹಗಲೇ 18 ವರ್ಷದ ಯುವತಿ ಶಾಲಿನಿ ಅಪಹರಣ ನಡೆದಿತ್ತು. ಇದು ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಇದೀಗ ಶಾಲಿನಿ, ನಾನು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದೆ. ಆತನೊಂದಿಗೆ ಈ ಹಿಂದೆಯೇ ನನಗೆ ವಿವಾಹ ಮಾಡಿಕೊಂಡಿದ್ದೆ. ಆದರೆ ಅಪ್ರಾಪ್ತಳಾಗಿದ್ದ ಕಾರಣ ಮದುವೆಯ ವಿಷಯವನ್ನು ಬಹಿರಂಗಪಡಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ.

ನನ್ನ ವಿವಾಹಕ್ಕೆ ಪೋಷಕರು ಸಮ್ಮತಿಸಿರಲಿಲ್ಲ. ಕೊನೆಗೆ ನನ್ನ ಗಂಡನ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಹೀಗಾಗಿ ಸ್ನೇಹಿತರ ಸಹಾಯದಿಂದ ಅಪಹರಣದ ನಾಟಕವಾಡಿದ್ದೇವೆ ಎಂದು ಯುವತಿ ಹೇಳಿದ್ದಾಳೆ.

ಘಟನೆಯ ವಿವರ:
ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಚಂದೂರ್ತಿ ಮಂಡಲದ ಮೂಡಪಲ್ಲಿಯಲ್ಲಿ ಇತ್ತೀಚೆಗೆ ಹಾಡಹಗಲೇ ಸಿನಿಮಾ ಶೈಲಿಯಲ್ಲಿ ಯುವತಿಯ ಅಪಹರಣ ನಡೆದಿತ್ತು. ತನ್ನ ತಂದೆಯೊಂದಿಗೆ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಯುವತಿಯನ್ನು ನಾಲ್ವರು ಅಪಹರಣಕಾರರು ತಂದೆಯ ಮೇಲೆ ದಾಳಿ ಮಾಡಿ ಅಪಹರಿಸಿದ್ದರು.

ವರದಿಗಳ ಪ್ರಕಾರ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಅಪಹರಣದ ದುಷ್ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net