ಬೋರ್​ವೆಲ್​ ಮೋಟರ್​ ಆನ್​ ಮಾಡಲು ಹೋದ ಮಹಿಳೆ ವಿದ್ಯುತ್​ ಸ್ಪರ್ಶದಿಂದ ಸಾವು!

Untitled design - 2023-08-10T201121.877
Published on

ಹೈದರಾಬಾದ್‌: ಮನೆಯ ನೆಲಮಹಡಿಯಲ್ಲಿದ್ದ ಬೋರ್‌ವೆಲ್ ಯಂತ್ರವನ್ನು ಆನ್​ ಮಾಡಲು ಪ್ರಯತ್ನಿಸಿದ ಮಹಿಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದಾರುಣ ಘಟನೆ ಹೈದರಾಬಾದ್‌ನ ಕುಕಟ್‌ಪಲ್ಲಿಯಲ್ಲಿ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಗಂಗಾಭವಾನಿ (33) ಎಂದು ಗುರುತಿಸಲಾಗಿದ್ದು, ಆಲ್ವಿನ್ ಕಾಲೋನಿಯ ಪೈಪ್‌ಲೈನ್ ರಸ್ತೆಯಲ್ಲಿರುವ ಪ್ರೇಮ್ ಸರೋವರ್ ಅಪಾರ್ಟ್‌ಮೆಂಟ್‌ನ ನಿವಾಸಿ ಎಂದು ಹೇಳಲಾಗಿದೆ. ಆಗಸ್ಟ್ 8 ರಂದು ಗಂಗಾಭವಾನಿ, ತಮ್ಮ ಮನೆಯ ನೆಲ ಮಹಡಿಯಲ್ಲಿದ್ದ ಬೋರ್‌ವೆಲ್ ಯಂತ್ರವನ್ನು ಆನ್​ ಮಾಡಲೆಂದು ಬಂದಿದ್ದಾರೆ. ಸ್ವಿಚ್​ ಬೋರ್ಡ್​​​ಗೆ ಕೈ ಹಾಕಿದ ವೇಳೆ ವಿದ್ಯುತ್​ ಸ್ಪರ್ಶಗೊಂಡು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯ ಸಂಪೂರ್ಣ ದೃಶ್ಯ ಮನೆಯೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿದ್ಯುತ್ ಸ್ಪರ್ಶವಾಗುವ ಮುನ್ನ ಮಹಿಳೆ ನಿಂತಿದ್ದ ನೆಲವು ನೀರಿನಿಂದ ತುಂಬಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net