

ನವದೆಹಲಿ: ನಮ್ಮ ಹವ್ಯಾಸಗಳಿಂದಲೇ ಹಣ ಮಾಡುವ ವೃತ್ತಿಯನ್ನಾಗಿ ಪರಿವರ್ತಿಸುವ ಕನಸಿನ ಉದ್ಯೋಗಕ್ಕಾಗಿ ನಮ್ಮಲ್ಲಿ ಎಷ್ಟು ಮಂದಿ ಬಯಸುತ್ತಾರೆ? ಆದರೆ ಈ ಜಗತ್ತಿನಲ್ಲಿ ಅದನ್ನು ಮಾಡಲು ಸಾಧ್ಯವಾಗುವ ಜನರಿದ್ದಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ಮಹಿಳೆ ಕೆಲಸ ಕಳೆದುಕೊಂಡ ಬಳಿಕ ಸದ್ಯ ಸ್ಕಿಪ್ಪಿಂಗ್ ಮಾಡ್ಕೊಂಡೆ ಹಣ ಮಾಡ್ತಿದ್ದಾರೆ.
32 ವರ್ಷದ ಈ ಮಹಿಳೆಯರ ಹೆಸರು ಲಾರೆನ್ ಫೈಮನ್, ಆದರೆ ಇಂಟರ್ನೆಟ್ ನಲ್ಲಿ ಈಕೆ ಫೇಮಸ್ ಆಗಿರೋದು ಲಾರೆನ್ ಜಂಪ್ಸ್ ಎನ್ನೋ ಹೆಸರಿನಿಂದ. ಈಕೆ ಸೇಲ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು, ಕೊರೋನಾ ಲಗ್ಗೆ ಇಟ್ಟ ಸಮಯದಲ್ಲಿ ಲಾಕ್ ಡೌನ್ ಆಗಿದ್ದಾಗ ಇವರನ್ನ ಕೆಲಸದಿಂದಲೇ ತೆಗೆದು ಹಾಕಿದ್ದರು. ಮನೆಯಲ್ಲಿ ಸುಮ್ಮನೆ ಇರೋದು ಯಾಕೆ ಎಂದು ಮನೆಯಲ್ಲಿಯೇ ಜಿಮ್ ಮಾಡೋದಕ್ಕೆ ಆರಂಭಿಸಿದ್ರು ಲಾರೆನ್. ಜೊತೆಗೆ ರೋಪ್ ಹಿಡಿದು ಸ್ಕಿಪ್ಪಿಂಗ್ ಮಾಡೊದಕ್ಕೂ ಆರಂಭಿಸಿದ್ರು.
ಸ್ಕಿಪ್ಪಿಂಗ್ ಮಾಡೊದ್ರಲ್ಲಿ ಎಷ್ಟೊಂದು ಎಕ್ಸ್ ಪರ್ಟ್ ಆದ್ರೂ ಅಂದ್ರೆ, ಬೇರೆ ಬೇರೆ ರೀತಿಯ ಸ್ಕಿಪ್ಪಿಂಗ್ ಕೂಡ ಕರಗತ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಅಕೌಂಟ್ ಗಳನ್ನ ತೆರೆದು, ಅದರಲ್ಲಿ ತಮ್ಮ ಸ್ಕಿಪ್ಪಿಂಗ್ ವಿಡೀಯೋ ಅಪ್ ಲೋಡ್ ಮಾಡೋದಕ್ಕೆ ಆರಂಭಿಸಿದ್ರು. ಇವರ ವಿಡೀಯೋಗಳು ಎಷ್ಟೊಂದು ಫೇಮಸ್ ಆದವು ಅಂದ್ರೆ ಹಲವಾರು ಬ್ರ್ಯಾಂಡ್ ಗಳು ಇವರ ಜತೆ ಕೊಲಾಬರೇಟ್ ಮಾಡೋಕೆ ಆರಂಭಿಸಿದವು. ಪ್ರಖ್ಯಾತ ಕಂಪನಿಯಾದ ಅಡಿಡಾಸ್ ಕೂಡ ಇವರೊಂದಿಗೆ ಟೈ ಅಪ್ ಮಾಡಿಕೊಂಡಿತ್ತು, ಪರಿಣಾಮ ಲಕ್ಷಾಂತರ ರೂಪಾಯಿ ಗಳಿಸೋಕೆ ಆರಂಭಿಸಿದರು ಲಾರೆನ್. ಮೊದಲು 9-5 ಗಂಟೆಯ ಉದ್ಯೋಗ ಮಾಡ್ತಿದ್ರು, ಈಗ 6-6 ಗಂಟೆಗಳ ಕಾಲ ಸ್ಕಿಪ್ಪಿಂಗ್ ಮಾಡ್ಕೊಂಡೆ ದುಡ್ಡು ಗಳಿಸ್ತಾರೆ.
ಲಾರೆನ್ ಫೈಮನ್ ಮಾತನಾಡಿ, "ನನ್ನ ಜೀವನವು ಅಗಾಧವಾಗಿ ಬದಲಾಗಿದೆ ಮತ್ತು ನಾನು ಈಗ ಹಲವು ವಿಧಗಳಲ್ಲಿ ಉತ್ತಮವಾಗಿದ್ದೇನೆ. ನನ್ನ ಹಿಂದಿನ ಕೆಲಸದಲ್ಲಿ ನನಗೆ ಸಂಬಳವಿತ್ತು, ಹಾಗಾಗಿ ನಾನು ತುಂಬಾ ಜಾಗರೂಕರಾಗಿರಬೇಕು. ಈ ಹಿಂದೆ ಸಾಧಿಸಲು ನನಗೆ ಎಂದಿಗೂ ಅವಕಾಶವಿರಲಿಲ್ಲ ಎಂದಿದ್ದಾರೆ.