ರಸ್ತೆ ಅಪಘಾತದಲ್ಲಿ ಮಹಿಳೆ ಸಾವು

3-npk-2.
ಮೈಸೂರು-ಮಾಣಿ ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿಯ ಕಡೆಪಾಲ ಎಂಬಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ವಾಹn ಜಖಂಗೊಂಡಿರುವುದು.
Published on

ನಾಪೋಕ್ಲು: ಮೈಸೂರು-ಮಾಣಿ ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿಯ ಕಡೆಪಾಲ ಬಳಿ ಟ್ಯಾಂಕರ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಮಹಿಳೆ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕೊಡಗು ಜಿಲ್ಲೆ ಹುದುಕೇರಿ ನಿವಾಸಿ ಶೋಭಾ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಡಿಕೇರಿಗೆ ಬರುತ್ತಿದ್ದ ಕಾರು ಹಾಗೂ ಸುಳ್ಯ ಕಡೆ ತೆರಳುವ ಟ್ಯಾಂಕರ್ ನಡುವೆ ಕಡೆಪಾಲ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಕಾರನಲ್ಲಿದ್ದವರು ಸಿದ್ದಾಪುರ ನೆಲ್ಲಿಹುದಿಕೇರಿ ಮೂಲದವರೆಂದು ಹೇಳಲಾಗಿದೆ. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net