

ಬೆಂಗಳೂರು : ಪಾದಚಾರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾದ ದ್ವಿಚಕ್ರ ವಾಹನ ಸವಾರನಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿ 2ನೇ ಸಂಚಾರ ನ್ಯಾಯಾಲಯ ತೀರ್ಪು ನೀಡಿದೆ.
ಬೈಕ್ ಸವಾರ ಜಗದೀಶ್ (26) ಅಪರಾಧಿ. 2016ರ ಮಾರ್ಚ್ 14ರ ರಾತ್ರಿ 7.30ರಲ್ಲಿ ದ್ವಿಚಕ್ರ ವಾಹನ ಸವಾರ ಜಗದೀಶ್, ಅವಿನ್ಯೂ ರಸ್ತೆ ಕಡೆಯಿಂದ ಅರಮನೆ ರಸ್ತೆ ಕಡೆಗೆ ವೇಗವಾಗಿ ಬಂದು ಪಾದಚಾರಿ ಎಂ.ಭಾವನ (60) ಎಂಬಾಕೆಗೆ ಡಿಕ್ಕಿ ಹೊಡೆದಿದ್ದ.
ಆನಂತರ ಬೈಕ್ ನಿಲ್ಲಿಸದೆ ಸವಾರ ಸ್ಥಳದಿಂದ ಪರಾರಿಯಾಗಿದ್ದ. ಪಾದಚಾರಿ ಭಾವನ, ಚಿಕಿತ್ಸೆ ಲಿಸದೆ ಸಾವನ್ನಪ್ಪಿದ್ದರು. ಈ ಕುರಿತು ಉಪ್ಪಾರಪೇಟೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸವಾರನನ್ನು ಬಂಧಿಸಿದ್ದರು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.