ಕಾಂಪೌಂಡ್‌ಗೆ ವಾಹನ ಡಿಕ್ಕಿಯಾಗಿ ಮಹಿಳೆ ಸಾವು

Published on

ಗೋಣಿಕೊಪ್ಪಲು: ಬಾಡಗರಕೇರಿ ಗ್ರಾಮದಲ್ಲಿ ಕಾಂಪೌಂಡ್‌ಗೆ ವಾಹನ ಡಿಕ್ಕಿಯಾಗಿ ಮಧ್ಯೆ ಸಿಲುಕಿದ ಮಹಿಳೆ ಮೃತಪಟ್ಟಿದ್ದಾರೆ. ಬಾಡಗರಕೇರಿ ಗ್ರಾಮದ ಕಾಯಪಂಡ ಮಧು ಮೋಟಯ್ಯ ಅವರ ಪತ್ನಿ ರಶ್ಮಿ (46) ಮೃತರು.

ಬುಧವಾರ ಬೆಳಗ್ಗೆ ಮನೆಯಿಂದ ತೋಟಕ್ಕೆ ತೆರಳಲು ವಾಹನ ನಿಲ್ಲಿಸಿ ಮನೆಯ ಗೇಟ್ ಹಾಕಲು ಮುಂದಾಗಿದ್ದಾರೆ. ಈ ಸಂದರ್ಭ ಚಾಲನೆಯಲ್ಲೇ ಇದ್ದ ವಾಹನ ದಿಢೀರ್ ಮುಂದೆ ಚಲಿಸಿ ರಶ್ಮಿ ಅವರಿಗೆ ಗುದ್ದಿದೆ. ಈ ಸಂದರ್ಭದಲ್ಲಿ ರಶ್ಮಿ ಗೇಟ್ ಹಾಗೂ ವಾಹನದ ನಡುವೆ ಸಿಲುಕಿದ ಹಿನ್ನೆಲೆಯಲ್ಲಿ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂದರ್ಭ ಮನೆಯಲ್ಲಿ ಯಾರು ಇರಲಿಲ್ಲ. ಪತಿ ಗೋಣಿಕೊಪ್ಪಕ್ಕೆ ತೆರಳಿದ್ದರು. ಮನೆಗೆ ಬಂದು ನೋಡಿದಾಗ ವಿಚಾರ ಗೊತ್ತಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಗುರುವಾರ ಅಂತ್ಯಕ್ರಿಯಡೆ ನಡದಿದ್ದು, ಮೃತರಿಗೆ ಪತಿ, ಪುತ್ರಿ, ಪುತ್ರ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net