ಆಸ್ಪತ್ರೆಗೆ ಹೋಗೋಣ ಎಂದು ಗಂಡ ಹೇಳಿದರೂ ಕೇಳದ ಮಹಿಳೆ ಅಬಾರ್ಶನ್​ ಮಾತ್ರೆ ಸೇವಿಸಿ ಸಾವು…

pregnancy
Published on

ಬೆಂಗಳೂರು: ವೈದ್ಯರ ಸಲಹೆ ತೆಗೆದುಕೊಳ್ಳದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬಾರದು ಎಂದು ಅನೇಕ ಬಾರಿ ಕೇಳಿದ್ದೇವೆ. ಆದರೂ ಅನೇಕರು ಈ ಸಲಹೆಯನ್ನು ನಿರ್ಲಕ್ಷಿಸಿ ಕೆಲವೊಮ್ಮೆ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ಮಹಿಳೆಯೊಬ್ಬರು ವೈದ್ಯರ ಸಲಹೆ ಪಡೆಯದೇ ಅಬಾರ್ಶನ್​ ಮಾತ್ರೆ ಸೇವಿಸಿ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ.

ಇತ್ತೀಚೆಗೆ ಪ್ರೀತಿ ಕುಶ್ವಾಸ್​ ಎಂಬ ಮಹಿಳೆ ಇತ್ತೀಚಿಗೆ ಪ್ರೆಗ್ನೆನ್ಸಿ ತಪಾಸಣೆ ಮಾಡಿಸಿಕೊಂಡಿದ್ದರು. ಆಗ ಆಕೆ ಗರ್ಭಿಣಿ ಆಗಿರುವುದು ಧೃಡವಾಗಿದೆ. ಈ ವಿಷಯವನ್ನು ಆಕೆ ತನ್ನ ಗಂಡನ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣ ಪತಿ, ಆಸ್ಪತ್ರೆಗೆ ಹೋಗಿ ತೋರಿಸೊಣ ಅಂತ ಹೇಳಿದ್ದಾನೆ. ಇದಕ್ಕೆ ಒಪ್ಪದ ಪ್ರೀತಿ ಕುಶ್ವಾಸ್, ಗಂಡನಿಗೆ ತಿಳಿಸದೆ ಅಬಾರ್ಶನ್ ಮಾತ್ರೆ ತೆಗೆದುಕೊಂಡಿದ್ದಾರೆ.

ಸ್ವಲ್ಪ ಸಮಯದ ನಂತರ ಮಹಿಳೆಗೆ ರಕ್ತಸ್ರಾವ ಶುರುವಾಗಿದೆ. ತಕ್ಷಣ ಆಕೆ ಪತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಪಂದಿಸಿದ ಕುಶ್ವಾಸ್​, ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ದುರದೃಷ್ಟವಷಾತ್​ ರಕ್ತಸ್ರಾವ ಹೆಚ್ಚಾಗಿ ಪತ್ನಿ ಪ್ರೀತಿ ಕುಶ್ವಾಸ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ತಲುಪಿದ ನಂತರ ಪ್ರೀತಿ ಕುಶ್ವಾಸ್​ರನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಈ ಘಟನೆ ಬಗ್ಗೆ ಮಹಿಳೆಯ ಸಹೋದರ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net