ಬಿರಿಯಾನಿ ತಿನ್ನುವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಯುವತಿ ಸಾವು! biryani

Malabar Biryani
Published on

ಮಹಾರಾಷ್ಟ್ರ : ( biryani )  ಗೆಳೆಯನೊಂದಿಗೆ ಊಟ ಮಾಡಲು ರೆಸ್ಟೋರೆಂಟ್‌ಗೆ ಹೋದ ಯುವತಿಯೊಬ್ಬಳು ಚಿಕನ್ ಬಿರಿಯಾನಿ ತಿನ್ನುವಾಗ ಗಂಟಲಿನಲ್ಲಿ ಕೋಳಿಯ ತುಂಡು ಸಿಲುಕಿ ಉಸಿರಾಡಲು ತೊಂದರೆಯಾಗಿ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ಮಹರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

ಯುವತಿ ತನ್ನ ಗೆಳೆಯನೊಂದಿಗೆ ಊಟ ಮಾಡಲು ರೆಸ್ಟೋರೆಂಟ್‌ಗೆ ಹೋದಳು. ಇಬ್ಬರೂ ಒಟ್ಟಿಗೆ ಚಿಕನ್ ಬಿರಿಯಾನಿ ಆರ್ಡರ್ ಮಾಡಿದರು. ಬಿರಿಯಾನಿ ತಿನ್ನುವಾಗ ಯುವತಿ ಗಂಟಲಿನಲ್ಲಿ ಕೋಳಿಯ ತುಂಡು ಸಿಲುಕಿಕೊಂಡಾಗ ಉಸಿರಾಡಲು ತೊಂದರೆಯಾಯಿತು. ಅವಳ ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಕೋಳಿಯ ತುಂಡು ತೆಗೆಯಲು ಸಾಧ್ಯವಾಗಲಿಲ್ಲ. ಉಸಿರಾಡಲು ಕಷ್ಟವಾದಾಗ ಅವಳು ಸ್ಥಳದಲ್ಲೇ ಕುಸಿದು ಬಿದ್ದಳು.

ನಡೆದಿದ್ದೇನು?:

ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದಳು. ಮಾಹಿತಿ ಪಡೆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net