

ಹೈದರಾಬಾದ್: ಮಕ್ಕಳಿಗೆ ಅಡುಗೆ ಮಾಡಲು ಗಂಡ ಗದರಿದ್ದಕ್ಕೆ ಸಿಟ್ಟಾದ ಪತ್ನಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಹೈದರಾಬಾದ್ ಬಳಿಯ ರಾಯಕಲ್ ಮಂಡಲದ ರಾಮಜಿಪೇಟೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮನೋಜ(27) ಮೃತೆ. ಮಂಡಲದ ಭೂಪತಿಪುರ ಗ್ರಾಮದ ಮನೋಜ ಅವರನ್ನು ಒಂಬತ್ತು ವರ್ಷಗಳ ಹಿಂದೆ ರಾಮಾಜಿಪೇಟೆಯ ಸುಧಾಕರ್ ಎಂಬುವರು ವಿವಾಹವಾಗಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಶನಿವಾರ ರಾತ್ರಿ ಸುಧಾಕರ್ ತರಕಾರಿ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು.
ಮನೆಗೆ ಹಿಂತಿರುಗಿ ಬಂದ ಬಳಿಕ ಮನೆಯಲ್ಲಿ ಮಕ್ಕಳು ಅನ್ನ, ಮೆಣಸಿನಕಾಯಿ ತಿನ್ನುತ್ತಿದ್ದರು. ಇದನ್ನೂ ಕಂಡ ಸುಧಾಕರ್ ಪತ್ನಿಗೆ ಗದರಿದ್ದಾರೆ. ಏನಾದ್ರು ಕರ್ರಿ(ಚಟ್ನಿ) ಮಾಡೋದಕ್ಕೆ ಏನಾಗಿತ್ತು. ನಾನೇ ಮಾಡುವೆ ಎಂದು ಅಡುಗೆ ಮನೆಯೊಳಗೆ ಹೋಗಿದ್ದಾರೆ. ಬೆಡ್ರೂಮ್ಗೆ ಬಂದ ಮನೋಜ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೋಜ್ ತಾಯಿ ವೆಂಕಟಿ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)