VIDEO| ಒಳಉಡುಪಿನಲ್ಲಿ 5 ಜೀವಂತ ಹಾವುಗಳನ್ನಿಟ್ಟು ಸಾಗಿಸುತ್ತಿದ್ದ ಯುವತಿ ಸಿಕ್ಕಿಬಿದ್ದಿದ್ದೇ ರೋಚಕ!

China Woman Snakes
Published on

ಬೀಜಿಂಗ್​: ಯುವತಿಯೊಬ್ಬಳು ಒಳಉಡುಪಿನಲ್ಲಿ ಹಾವುಗಳನ್ನು ಕದ್ದು ಸಾಗಿಸುವಾಗ ಸಿಕ್ಕಿಬಿದ್ದ ವಿಚಿತ್ರ ಘಟನೆ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿರುವ ಫ್ಯೂಟಿಯನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಯುವತಿಯ ಅಸಮಾನ್ಯ ದೇಹದ ರಚನೆ ನೋಡಿ ಅನುಮಾನಗೊಂಡ ಅಧಿಕಾರಿಗಳು ಆಕೆಯನ್ನು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ಬ್ರಾನಲ್ಲಿ ವಿಷವಿಲ್ಲದ ಐದು ಕಾರ್ನ್​ ಸ್ನೇಕ್ಸ್​ ಪತ್ತೆಯಾಗಿವೆ. ಯುವತಿಯ ಗುರುತನ್ನು ಬಹಿರಂಗಗೊಳಿಸಿಲ್ಲ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಯುವತಿ ಬಳಿ ಇದ್ದ ಹಾವುಗಳು ಯಾವುದೇ ಪರಿಸರಕ್ಕೆ ಬಹಳ ಹೊಂದಿಕೊಳ್ಳಬಲ್ಲವು ಮತ್ತು ವಿವಿಧ ಪರಿಸರವನ್ನು ಸಹಿಸಿಕೊಳ್ಳಬಲ್ಲವು. ಸುರಂಗಗಳು, ಎಲೆಗಳ ಕಸ, ಗುಹೆಗಳು, ಮರದ ಟೊಳ್ಳುಗಳು, ಬಂಡೆಗಳು, ಸಸ್ಯವರ್ಗದ ಗುಂಪುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

(ವಿಡಿಯೋ ಕೃಪೆ: ಫಸ್ಟ್​ಪೋಸ್ಟ್​)

ಈ ಘಟನೆಯು ಚೆನ್ನೈನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಪ್ರಕರಣಕ್ಕೆ ಹೋಲುತ್ತದೆ. ಕಳ್ಳಸಾಗಾಣಿಕೆದಾರರು ಹಾವು ಮಾತ್ರವಲ್ಲದೆ ಕೋತಿ ಮತ್ತು ಆಮೆಯನ್ನು ಚೀಲದಲ್ಲಿ ಸಾಗಿಸುತ್ತಿರುವುದು ಕಂಡುಬಂದಿತ್ತು. ಲಗೇಜ್​ನಲ್ಲಿ 45 ಬಾಲ್ ಹೆಬ್ಬಾವುಗಳು, ಮೂರು ಮರ್ಮೊಸೆಟ್ ಮಂಗಗಳು, ಮೂರು ನಕ್ಷತ್ರ ಆಮೆಗಳು ಮತ್ತು ನಾಲ್ಕು ಕೋನ್ ಹಾವುಗಳು ಪತ್ತೆಯಾಗಿದ್ದವು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net