ಪ್ರೀತಿ ಒಪ್ಪದ ನರ್ಸ್​ಗೆ ಈ ಪಾಪಿ ಕೊಟ್ಟಿದ್ದು ಕ್ರೂರ ಶಿಕ್ಷೆ...

crime
Published on

ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ಪಾಪಿ ಇದೆಂಥಾ ಕೆಲಸ ಮಾಡಿಬಿಟ್ಟ ನೋಡಿ.

ಆಂಧ್ರಪ್ರದೇಶದ ವಿಜಯವಾಡದ ಹನುಮಾನ್​ಪೇಟ್​​ನಲ್ಲಿ ಈ ಭೀಕರ ಘಟನೆ ನಡೆದಿದೆ. ಈ ಯುವತಿ ನರ್ಸ್. ಕೊವಿಡ್​-19 ಸೆಂಟರ್​​ನಲ್ಲಿ ಕೆಲಸ ಮಾಡುತ್ತಿದ್ದರು.

ಈ ಯುವತಿಗೆ ಯುವಕನೋರ್ವ ನಾನು ನಿಮ್ಮ ಪ್ರೀತಿ ಮಾಡುತ್ತಿರುವುದಾಗಿ ಹೇಳಿದ್ದ. ಆದರೆ ನರ್ಸ್​ ಅದನ್ನು ತಿರಸ್ಕರಿಸಿದ್ದರು.

ಇಂದೂ ಕೂಡ ಆ ಯುವತಿಯನ್ನು ಅಡ್ಡ ಹಾಕಿ ಲವ್​ ಪ್ರಪೋಸ್ ಮಾಡಿದ. ಅದಕ್ಕೆ ಅವರು ಒಪ್ಪದೆ ಇದ್ದಾಗ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ಆಕೆ ನಿಂತಲ್ಲಿಯೇ ಸಜೀವ ದಹನ ಆಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಆರೋಪಿಯನ್ನಿನ್ನೂ ಬಂಧಿಸಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net