

ನವದೆಹಲಿ: ( Slap Me ) ಜನರಿಗೆ ತರ್ಲೆ ಪ್ರಶ್ನೇ ಕೇಳುವ, ರೋಡ್ ಮೇಲೆ ಸ್ಟಂಟ್ ಮಾಡುವ ಅನೇಕ ವೈರಲ್ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಯುವತಿ ಬೋರ್ಡ್ ಮೇಲೆ " ಸ್ಲಾಪ್ ಮಿ " ಎಂದು ಬರೆದುಕೊಂಡು ಜನರಿಂದ ದುಡ್ಡು ತೆಗೆದುಕೊಳ್ಳುತ್ತಾ ಪ್ರ್ಯಾಂಕ್ ವಿಡಿಯೋ ಮಾಡುತ್ತಿರುವ ಈ ಯುವತಿ ಒಂದು ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡು ಹೀಗೆ ಮಾಡುತ್ತಿದ್ದಾಳೆ.
ದೆಹಲಿಯ ಬೀದಿಯಲ್ಲಿ ಯುವತಿಯೊಬ್ಬಳು ನನಗೆ ಕಪಾಳಮೋಕ್ಷ ಮಾಡಿ ( Slap Me) ಎಂದು ಬೋರ್ಡ್ ಹಿಡಿದುಕೊಂಡು ನಿಂತಿದ್ದಳು. ಅಲ್ಲಿಗೆ ಬಂದ ಜನರು ಬೋರ್ಡ್ ನೋಡಿ ಅವಳಿಗೆ ನೋವಾಗದಂತೆ ಹೊಡೆದು ಹೋಗುತ್ತಿರುವ ವಿಡಿಯೋದಲ್ಲಿ ನೋಡ ಬಹುದಾಗಿದೆ.
ಯುವತಿಗೆ ಹೊಡೆದು ಅಲ್ಲಿಂದ ತಿರುಗಿ ಹೋಗುತ್ತಿದ್ದವರಿಗೆ ಶಾಕ್ ನೀಡಿದ್ದಾಳೆ. ಅವರನ್ನು ತಡೆದು ಬೋರ್ಡ್ ತಿರುಗಿಸಿ ( Nikalo 100 rupees) ಎಂದು ಅವರಿಂದ ದೊಡ್ಡು ಕೇಳುತ್ತಿದ್ದಾಳೆ. ಅದನ್ನು ನೋಡಿದವರಿಗೆ ಶಾಕ್ ಮತ್ತು ತಮಾಷೆಯಾಗಿ ಕಂಡಿದೆ. ಕೆಲವರು ಹಾಗೇ ಹೋದರೆ ಇನ್ನು ಕೆಲವರು ಅವಳಿಗೆ 100 ರೂ. ನೀಡಿದ್ದಾಳೆ.
ಜನರಿಂದ ಹೊಡೆಸಿಕೊಂಡು ಹಣವನ್ನು ತೆಗೆದುಕೊಳ್ಳುತ್ತಿದ್ದ ಯುವತಿಯನ್ನು ನೋಡಿ ಎಲ್ಲರೂ ತಮಾಷೆ ಮಾಡುತ್ತಿದ್ದಾರೆ. ಆದರೆ ಯುವತಿ ಬೀದಿ ಬದಿಯಲ್ಲಿ ನೆಲೆಸಿರುವವರಿಗೆ ಬಿಸ್ಕತ್ ಮತ್ತು ಊಟವನ್ನು ಹಂಚುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಈ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಆಗಿದ್ದು, ಈಗಾಗಲೇ ಸಖತ್ ವೈರಲ್ ಆಗಿ 4.7 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಯುವತಿ ತಾನು ಕೆನ್ನೆಗೆ ಹೊಡೆಸಿಕೊಂಡು ಬಂದಿರುವ ಹಣದಿಂದ ನಿರ್ಗತಿಕರಿಗೆ ಊಟ ಹಂಚುತ್ತಿದ್ದಾಳೆ. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.