ಕಳ್ಳತನದ ಕೇಸಲ್ಲಿ ಬಂಧನಕ್ಕೊಳಗಾದ ಮಹಿಳೆ, ಮರಳಿ ಬಂದದ್ದು ಶವವಾಗಿ!

lockup
Published on

ಹೈದರಾಬಾದ್​ : ಕಳ್ಳತನದ ಆರೋಪದ ಮೇಲೆ ಬಂಧಿತಳಾದ ಮಹಿಳೆಯೊಬ್ಬಳು ಪೊಲೀಸ್​ ಕಿರುಕುಳದಿಂದಾಗಿ ಲಾಕಪ್​​ನಲ್ಲಿ ಮೃತಮಟ್ಟಿದ್ದಾಳೆ ಎಂದು ಆಪಾದಿಸಲಾಗಿದೆ. ತೆಲಂಗಾಣದ ಯಾದಾದ್ರಿಯಲ್ಲಿನ ಅಡ್ಡಗುಡೂರ್​ ಪೊಲೀಸರು ಬಂಧಿಸಿದ್ದ 45 ವರ್ಷದ ಏಸುಮ್ಮ ಎಂಬುವರು ಮೃತರು.

ಕಳ್ಳತನದ ವಿಚಾರಣೆ ನಡೆಸಲು ಏಸುಮ್ಮಳನ್ನು ಶುಕ್ರವಾರ ಬಂಧಿಸಿ ಲಾಕಪ್​ನಲ್ಲಿರಿಸಿದ್ದರು. ಪೊಲೀಸರು ನೀಡಿದ ಕಿರುಕುಳದಿಂದಾಗಿ ಆಕೆ ಶನಿವಾರದಂದು ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆಪಾದನೆಯನ್ನು ನಿರಾಕರಿಸಿದ್ದಾರೆ.

ಶನಿವಾರದಂದು ಏಸುಮ್ಮ ಮತ್ತು ಆಕೆಯ ಮಗನನ್ನು ಕಳ್ಳತನದ ಪ್ರಕರಣದಲ್ಲಿ ವಿಚಾರಣೆಗಾಗಿ ಅಡ್ಡಗುಡೂರ್ ಪೊಲೀಸ್​ ಠಾಣೆಗೆ ಕರೆತರಲಾಯಿತು. ಆಕೆ ಠಾಣೆಯಲ್ಲಿ ಮೂರ್ಛೆ ಹೋದುದರಿಂದ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು ಆಕೆ ಸತ್ತುಹೋಗಿದ್ದಾಳೆಂದು ಘೋಷಿಸಿದರು ಎಂದು ಯಾದಾದ್ರಿ ಡಿಸಿಪಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net