

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ಬೇರೆ ರಾಜ್ಯದಿಂದ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸರಸ್ವತಿ ಅಲಿಯಾಸ್ ಸ್ವಾತಿಯನ್ನು ಬಂಧಿಸಿದ್ದಾರೆ.
ಹೊರರಾಜ್ಯದ ಬಡ ಯುವತಿಯರನ್ನು ಕೆಲಸ ಕೊಡಿಸುದಾಗಿ ಹೊರ ರಾಜ್ಯದಿಂದ ನಗರಕ್ಕೆ ಕರೆ ತಂದು ನಂತರ ಯಾವುದೇ ಕೆಲಸ ಕೊಡಿಸದೇ ಅವರಿಗೆ ಹಣದ ಆಮಿಷ ತೋರಿಸಿ, ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪ್ರೇಜರ್‌ಟೌನ್‌ನಲ್ಲಿದ್ದ ಸ್ಪಾ ಮೇಲೆ ದಾಳಿ ನಡೆಸಿ ಆರೋಪಿತೆಯನ್ನು ಬಂಧಿಸಿ ಯುವತಿರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸಾಜ್ ಮತ್ತು ಸ್ಪಾ ನಡೆಸುವುದಾಗಿ ಕಟ್ಟಡ ಬಾಡಿಗೆಗೆ ಪಡೆದಿದ್ದ ಆರೋಪಿತೆಯು ಸರಸ್ವತಿ, ಜ್ಯೋತಿ, ಸ್ವಾತಿ ಹೀಗೆ ಹಲವು ಹೆಸರನ್ನು ಇಟ್ಟುಕೊಂಡು, ಪುರುಷರನ್ನು ಸಂಪರ್ಕಿಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಸಿಸಿಬಿ ಇನ್‌ಸ್ಪೆಕ್ಟರ್ ರಾಜ ಅವರು ನೀಡಿದ ದೂರಿನನ್ವಯ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.