ರಕ್ಷಣಾ ಸಚಿವರ ಕಚೇರಿಯೊಳಗೇ ರೇಪ್​! ಕ್ಷಮೆಯಾಚಿಸಿದ ಆಸ್ಟ್ರೇಲಿಯಾ ಪ್ರಧಾನಿ

rape
Published on

ಕ್ಯಾನ್ಬೆರಾ: ಆಸ್ಟ್ರೇಲಿಯಾದ ಸಂಸತ್​ ಭವನದ ರಕ್ಷಣಾ ಸಚಿವರ ಕಚೇರಿಯೊಳಗೇ ಮಹಿಳೆಯೊಬ್ಬಳು ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಆರೋಪಿಸಿದ್ದಾಳೆ. ಮಹಿಳೆಯ ದೂರಿನಿಂದಾಗಿ ಮನನೊಂದಿರುವ ಪ್ರಧಾನಿ ಸ್ಕಾಟ್ ಮಾರಿಸನ್ ಮಹಿಳೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

2019ರ ಮಾರ್ಚ್​ನಲ್ಲಿ ಸಭೆ ಇರುವುದಾಗಿ ಹೇಳಿ ನನ್ನನ್ನು ಕಚೇರಿಗೆ ಕರೆಸಲಾಯಿತು. ನಂತರ ಅಲ್ಲಿನ ಸಿಬ್ಬಂದಿಯೊಬ್ಬರು ನನ್ನನ್ನು ಅತ್ಯಾಚಾರ ಮಾಡಿದರು ಎಂದು ಮಹಿಳೆ ಮಾಧ್ಯಮದ ಎದುರು ಹೇಳಿಕೊಂಡಿದ್ದಾರೆ. ಪ್ರಸಕ್ತ ರಕ್ಷಣಾ ಸಚಿವ ಲಿಂಡಾ ರೆನಾಲ್ಡ್ಸ್ ಅವರ ಸಿಬ್ಬಂದಿಯೇ ರೇಪ್​ ಮಾಡಿರುವುದಾಗಿ ಆಕೆ ತಿಳಿಸಿದ್ದಾಳೆ. ನಾನು ಆಗಲೇ ಪೊಲೀಸರಲ್ಲಿ ಈ ವಿಚಾರ ಹಂಚಿಕೊಂಡಿದ್ದೇನೆ. ಆದರೆ ಒಂದು ಫಾರ್ಮಲ್​ ದೂರನ್ನು ನೀಡಬೇಕೆಂದು ಆ ಕ್ಷಣಕ್ಕೆ ಸುಮ್ಮನಾಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಅಧಿಕೃತವಾಗಿ ದೂರನ್ನು ನೀಡಿದ್ದಾರೆಯೇ ಎನ್ನುವುದರ ಕುರಿತು ಆಕೆ ಮಾಹಿತಿ ನೀಡಿಲ್ಲ.

ಮಹಿಳೆಯ ಆರೋಪದಿಂದಾಗಿ ಸ್ಕಾಟ್ ಮಾರಿಸನ್ ಬೇಸರಗೊಂಡಿದ್ದಾರೆ. ಇಂತಹ ಕೃತ್ಯ ಎಂದಿಗೂ ನಡೆಯಬಾರದು. ಸಂತ್ರಸ್ತ ಮಹಿಳೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ. ಆಕೆಯ ಮೇಲೆ ದುಷ್ಕೃತ್ಯ ಮೆರೆದವರ ಬಗ್ಗೆ ತನಿಖೆ ನಡೆಸಿ ಕಠಿಣ ಶಿಕ್ಷೆ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸದ್ಯ ಈ ಸುದ್ದಿ ಆಸ್ಟ್ರೇಲಿಯಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net