ನವಜಾತ ಶಿಶುವನ್ನು ಕೊಂದು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿಟ್ಟ ತಾಯಿ! Newborn Baby

Woman allegedly stabbed newborn baby with letter opener mid childbirth
Published on

ಅಮೆರಿಕಾ:  ( Newborn Baby ) ತಾಯಿ ತನ್ನ ಮಕ್ಕಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ.  ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ  . ಆದರೆ ಇಲ್ಲೊಬ್ಬಳು  ಮಹಿಳೆ ತನ್ನ ಸ್ವಂತ ಮಗುವನ್ನು ಕೊಂದಿದ್ದಾಳೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಗುವಿಗೆ ಜನ್ಮ ನೀಡಿದ ನಂತರ, ಆ ಮಹಿಳೆಯ ಮುಖದಲ್ಲಿ ತಾಯ್ತನದ ಸಂತೋಷ ಎಲ್ಲಿಯೂ ಕಾಣಲಿಲ್ಲ. ಇದಲ್ಲದೆ, ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆ ದುಃಖಿತಳಾಗಿದ್ದಳು. ಅವಳ ಮುಖದಲ್ಲಿ ಸ್ವಲ್ಪ ಕೋಪವಿತ್ತು. ಹೊಕ್ಕುಳಬಳ್ಳಿಯನ್ನು ಕತ್ತರಿಸಿದ ನಂತರ ಮಹಿಳೆ  ಶಿಶುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ದಾಳಿಯ ನಂತರ ಮಗು ತಕ್ಷಣವೇ ಸಾವನ್ನಪ್ಪಿತು. ನಂತರ ಮಹಿಳೆ ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮತ್ತೊಂದು ಕೋಣೆಯ ಕಡೆಗೆ ಎಸೆದಿದ್ದಾಳೆ.

ಈಸ್ಲಿ ಪೊಲೀಸ್ ಇಲಾಖೆಯು ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ತುರ್ತು ಪರಿಸ್ಥಿತಿಯ ಕುರಿತು 911 ಗೆ ಕರೆ ಮಾಡಿ, ಇತ್ತೀಚೆಗೆ ಹೆರಿಗೆಯಾದ ಮಹಿಳೆಗೆ ತುರ್ತು ವೈದ್ಯಕೀಯ ಆರೈಕೆಯನ್ನು ಕೋರಲಾಯಿತ್ತು. ಪೊಲೀಸರು ಮತ್ತು ಪಿಕನ್ಸ್ ಕೌಂಟಿ ಇಎಂಎಸ್ ರಾತ್ರಿ 8:30 ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದರು. ಅಲ್ಲಿನ ದೃಶ್ಯ ನೋಡಿ ಅವರಿಗೆ ಆಘಾತವಾಯಿತು.

ಏಕೆಂದರೆ ಆ ಮಹಿಳೆ ತನ್ನ ನವಜಾತ ಶಿಶುವನ್ನು ಡಬ್ಬಿಯ ಓಪನರ್‌ನಿಂದ ಕೊಂದಳು. ನಂತರ ಅವರು ಮಗುವಿನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮತ್ತೊಂದು ಕೋಣೆಯಲ್ಲಿ ಎಸೆದಿದ್ದಾರೆ.

ದಕ್ಷಿಣ ಕೆರೊಲಿನಾದ ಪೊಲೀಸ್ ಅಧಿಕಾರಿಗಳು, ಸಾವನ್ನಪ್ಪಿದ ನವಜಾತ ಶಿಶುವನ್ನು  ನೋಡಿದ್ದಾರೆ. ಮಗುವನ್ನು ಕೊಂದ ತಾಯಿಯನ್ನು ವಶಕ್ಕೆ ಪಡೆಯಲಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಎನ್‌ಗೋ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ, ಮಹಿಳೆಯ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ಮಹಿಳೆಯ ,ಮಾನಸಿಕ ಆರೋಗ್ಯ ಸ್ಥಿತಿ ಸರಿ ಇಲ್ಲವೆ? ಯಾಕ ಹೀಗೆ  ಮಾಡಿದ್ದಾರೆ? ಕಾರಣವೇನು ಎನ್ನುವ ಕುರಿತಾಗಿ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net