ನನ್ನ ಬಿಟ್ಟು ಹೋಗ್ಬೆಡವೆಂದು ಕಣ್ಣೀರಿಟ್ಟ ಗಂಡ..ಸರ್ಕಾರಿ ಕೆಲಸ ಕೊಡಿಸಿದ ಪತಿಗೆ ಕೈ ಕೊಟ್ಟ ಪತ್ನಿ ಎಸ್ಕೇಪ್

Woman Abandons Husband
Published on

ಉತ್ತರಪ್ರದೇಶ: ಪತ್ನಿ ವ್ಯಾಸಂಗಕ್ಕೆ ಸಹಾಯ ಮಾಡಿದ್ದು, ಜೀವನದಲ್ಲಿ ಮುಂದೆ ಬಂದ ನಂತರ ಆಕೆ ತನ್ನನ್ನು ತೊರೆದಿದ್ದಾಳೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಹೆಂಡತಿಯೊಬ್ಬಳು ಸರ್ಕಾರಿ ನೌಕರಿ ಸಿಕ್ಕಿದ ಬೆನ್ನಲ್ಲೇ ತನ್ನ ಗಂಡನ ಬಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.

ವಿಶ್ವಕರ್ಮ ಎಂಬ ವ್ಯಕ್ತಿ 2 ವರ್ಷದ ಹಿಂದಷ್ಟೇ ರಿಚಾಳನ್ನು ಮದುವೆಯಾಗಿದ್ದ. ಸರ್ಕಾರಿ ನೌಕರಿ ಆಸೆ ಹೊಂದಿದ್ದ ಪತ್ನಿಗೆ ಓದಿನಲ್ಲೂ ಸಹಾಯ ಮಾಡಿದ್ದ. ಆಕೆಗೆ ಈಗ ಸರ್ಕಾರಿ ಕೆಲಸ ಸಿಕ್ತಾಯಿದ್ದಂತೆ ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ. ಮನನೊಂದಿರುವ ಪತಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾನೆ.

ಪತ್ನಿ ಇನ್ನು ಮುಂದೆ ತನ್ನೊಂದಿಗೆ ಮಾತನಾಡುತ್ತಿಲ್ಲ ಮತ್ತು ತನ್ನ ಕರೆಗಳನ್ನು ಸಹ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಕಾಲೇಜಿಗೆ ಭೇಟಿ ನೀಡುವ ನೆಪದಲ್ಲಿ ಮನೆಯಿಂದ ಹೊರಟರು. ಆದರೆ, ಆ ಬಳಿಕ ಆಕೆ ಹಿಂತಿರುಗಿರಲಿಲ್ಲ ಎಂದು ಗೋಳಿಟ್ಟಿದ್ದಾನೆ.

ಅಂದ್ಹಾಗೆ ಗಂಡನ ಬಿಟ್ಟು ಹೋದ ಮಹಿಳೆ ಲೆಕ್ಕಪತ್ರ ಪರಿಶೀಲನಾ ಅಧಿಕಾರಿಯಾಗಿ ನೇಮಕಗೊಂಡಿದ್ದಾಳೆ. 2022 ಫೆಬ್ರವರಿ 6ರಲ್ಲಿ ಇಬ್ಬರು ನ್ಯಾಯಾಲಯದಲ್ಲಿ ಮದುವೆ ಆಗಿದ್ದರು. ಪತ್ನಿ ಮಾಡಿದ ವಂಚನೆಯಿಂದ ಪತಿ ಕಂಗಾಲ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net